ಕೋಲ್ಕತಾ[ಏ.14]: ವಿಜಯ ಲಕ್ಷ್ಮಿಯನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ಐಪಿಎಲ್‌ 12ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕೂತಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಭಾನುವಾರ ಲಯ ಕಳೆದುಕೊಂಡು ಪರದಾಡುತ್ತಿರುವ ಕೋಲ್ಕತಾ ನೈಟ್‌ರೈಡ​ರ್ಸ್ ವಿರುದ್ಧ ಸೆಣಸಲಿದೆ. 

ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಿಸಿ ಪ್ಲೇ-ಆಫ್‌ ಹೊಸ್ತಿಲು ತಲುಪುವ ಲೆಕ್ಕಾಚಾರದಲ್ಲಿ ಎಂ.ಎಸ್‌.ಧೋನಿ ಪಡೆ ಇದ್ದರೆ, ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುವ ಒತ್ತಡ ದಿನೇಶ್‌ ಕಾರ್ತಿಕ್‌ ನೇತೃತ್ವದ ತಂಡದ ಮೇಲಿದೆ.

ಉಭಯ ತಂಡಗಳ ನಡುವೆ ಇದು 2ನೇ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸುಲಭ ಗೆಲುವು ಸಾಧಿಸಿತ್ತು. ಈ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಕೆಕೆಆರ್‌, ಇದೀಗ ಚೆನ್ನೈ ವಿರುದ್ಧವೂ 2ನೇ ಸೋಲು ಕಾಣುವ ಭೀತಿಯಲ್ಲಿದೆ.

ಚೆನ್ನೈ ಪಂದ್ಯದಲ್ಲಿ ಮಣಿಕಟ್ಟು ಗಾಯಕ್ಕೆ ತುತ್ತಾಗಿದ್ದರೂ, ಡೆಲ್ಲಿ ವಿರುದ್ಧ ಪಂದ್ಯವಾಡಿದ ಆ್ಯಂಡ್ರೆ ರಸೆಲ್‌ ನೋವಿನಿಂದ ಬಳಲಿದ್ದರು. ಭಾನುವಾರದ ಪಂದ್ಯಕ್ಕೆ ಅವರು ಅಲಭ್ಯರಾಗುವ ಸಾಧ್ಯತೆ ಇದ್ದು, ಕೆಕೆಆರ್‌ಗೆ ಭಾರೀ ಹಿನ್ನಡೆ ಉಂಟಾಗಲಿದೆ.

ಪಿಚ್‌ ರಿಪೋರ್ಟ್‌:
ಈಡನ್‌ ಗಾರ್ಡನ್ಸ್‌ ಪಿಚ್‌ ಕಳೆದ ಪಂದ್ಯದಲ್ಲಿ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಿತ್ತು. ಮೊದಲು ಬ್ಯಾಟ್‌ ಮಾಡುವ ತಂಡ 180ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು. ಟಾಸ್‌ ಪ್ರಮುಖ ಪಾತ್ರ ವಹಿಸಲಿದೆ.

ಒಟ್ಟು ಮುಖಾಮುಖಿ: 19

ಚೆನ್ನೈ: 12

ಕೆಕೆಆರ್‌: 07

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ವಾಟ್ಸನ್‌, ಡುಪ್ಲೆಸಿ, ರೈನಾ, ರಾಯುಡು, ಜಾಧವ್‌, ಧೋನಿ(ನಾಯಕ), ಜಡೇಜಾ, ಸ್ಯಾಂಟ್ನರ್‌, ದೀಪಕ್‌ ಚಾಹರ್‌, ಶಾರ್ದೂಲ್‌, ತಾಹಿರ್‌.

ಕೆಕೆಆರ್‌: ಕ್ರಿಸ್‌ ಲಿನ್‌, ಜೋ ಡೆನ್ಲಿ, ಉತ್ತಪ್ಪ, ರಾಣಾ, ಕಾರ್ತಿಕ್‌ (ನಾಯಕ), ಗಿಲ್‌, ಬ್ರಾಥ್‌ವೇಟ್‌, ಚಾವ್ಲಾ, ಕುಲ್ದೀಪ್‌, ಫಗ್ರ್ಯೂಸನ್‌, ಪ್ರಸಿದ್‌್ಧ ಕೃಷ್ಣ.

ಸ್ಥಳ: ಕೋಲ್ಕತಾ 
ಪಂದ್ಯ ಆರಂಭ: ಸಂಜೆ 4ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.