ಮೊಹಾಲಿ[ಏ.16]: ಸ್ಥಿರತೆ ಕೊರತೆ ಎದುರಿಸುತ್ತಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಐಪಿಎಲ್‌ 12ನೇ ಆವೃತ್ತಿಯಲ್ಲಿ ಮಂಗಳವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಲಿದೆ. ಇಲ್ಲಿ ನಡೆಯಲಿರುವ ಪಂದ್ಯ ಕಿಂಗ್ಸ್‌ ಇಲೆವೆನ್‌ ಪಾಲಿಗೆ ಬಹುಮುಖ್ಯ ಎನಿಸಿದೆ. 

ಈಗಾಗಲೇ 8 ಪಂದ್ಯಗಳಲ್ಲಿ 4 ಸೋಲುಗಳನ್ನು ಕಂಡು 5ನೇ ಸ್ಥಾನಕ್ಕೆ ಕುಸಿದಿರುವ ಪಂಜಾಬ್‌, ಪ್ಲೇ-ಆಫ್‌ಗೇರಬೇಕಿದ್ದರೆ ಉಳಿದಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇಬೇಕಿದೆ. ಪಂಜಾಬ್‌ ಬ್ಯಾಟಿಂಗ್‌ ಬಲಿಷ್ಠವಾಗಿದ್ದರೂ, ಬೌಲಿಂಗ್‌ ಪಡೆ ಸತತ ವೈಫಲ್ಯ ಕಾಣುತ್ತಿದೆ. 

ಮತ್ತೊಂದೆಡೆ ಮುಂಬೈ ವಿರುದ್ಧ ಸಾಧಿಸಿದ ಗೆಲುವು ರಾಜಸ್ಥಾನದ ಉತ್ಸಾಹ ಹೆಚ್ಚಿಸಿದೆ. ತಂಡ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದುಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. 7 ಪಂದ್ಯಗಳಲ್ಲಿ ರಾಯಲ್ಸ್‌ ಕೇವಲ 2 ಪಂದ್ಯಗಳಲ್ಲಿ ಗೆದ್ದಿದೆ.

ಸ್ಥಳ: ಮೊಹಾಲಿ
ಪಂದ್ಯ ಆರಂಭ: ರಾತ್ರಿ 8ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1