Asianet Suvarna News Asianet Suvarna News

ಭಾರತೀಯ ಬಾಕ್ಸಿಂಗ್ ಫೆಡರೇಶನ್'ಗೆ ಮಾನ್ಯತೆ ನೀಡಿದ ಐಒಎ

ಫೆಬ್ರವರಿ 7ರಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ದೇಶನದ ಮೇರೆಗೆ, ಐಒಎಯ ಕಾರ್ಯಕಾರಿ ಸಮಿತಿಯು ಬಿಎಫ್'ಐ ಸದಸ್ಯತ್ವಕ್ಕೆ ಅನುಮೋದನೆಯನ್ನು ನೀಡಿದೆ.

IOA grants affiliation to Boxing Federation of India

ನವದೆಹಲಿ(ಏ.08): ಬಹುದಿನಗಳಿಂದ ಉಂಟಾಗಿದ್ದ ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಹಾಗೂ ಭಾರತೀಯ ಬಾಕ್ಸಿಂಗ್ ಒಕ್ಕೂಟ(ಬಿಎಫ್'ಐ) ನಡುವಿನ ಬಿಕ್ಕಟ್ಟು ಕೊನೆಗೂ ಬಗೆಹರಿದಿದ್ದು, ಐಒಎಯು ಬಿಎಫ್'ಐಗೆ ಸದಸ್ಯತ್ವದ ಮಾನ್ಯತೆಯನ್ನು ನೀಡಿದೆ.

ಫೆಬ್ರವರಿ 7ರಂದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಿರ್ದೇಶನದ ಮೇರೆಗೆ, ಐಒಎಯ ಕಾರ್ಯಕಾರಿ ಸಮಿತಿಯು ಬಿಎಫ್'ಐ ಸದಸ್ಯತ್ವಕ್ಕೆ ಅನುಮೋದನೆಯನ್ನು ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್'ನಲ್ಲಿ ಕ್ರೀಡಾ ಸಚಿವಾಲಯ ವೀಕ್ಷಕರಾಗಿದ್ದ, ಇಂಟರ್'ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ ಸಮ್ಮುಖದಲ್ಲಿ ಬಿಎಫ್'ಐ ಚುನಾವಣೆ ನಡೆಸಿತ್ತು.

ಐಒಎಯು ಬಿಎಫ್ಐಗೆ ನೀಡಿರುವ ಸದಸ್ಯತ್ವದ ಸ್ಥಾನಮಾನದ  ನಿರ್ಧಾರವನ್ನು ಸ್ವಾಗತಿಸುತ್ತೇನೆ. ಭಾರತೀಯ ಕ್ರೀಡಾ ಭವಿಷ್ಯ ಹಾಗೂ ಕ್ರೀಡಾಪಟುಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕ್ರೀಡಾಸಂಸ್ಥೆಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಬಿಎಫ್ಐ ಮುಖ್ಯಸ್ಥ ಅಜಯ್ ಸಿಂಗ್ ಹೇಳಿದ್ದಾರೆ.

Follow Us:
Download App:
  • android
  • ios