ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ ಅರ್ಧಶತಕ ಸಿಡಿಸಿ ಸಂಭ್ರಮಿಸಿದರೆ, ಆರ್. ಅಶ್ವಿನ್, ಜಡೇಜಾ ಕೂಡ ಹೊಸ ದಾಖಲೆಗಳನ್ನು ನಿರ್ಮಿಸಿದರು.
ಬೆಂಗಳೂರು(ಮಾ.26): ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದ್ದು ಎರಡನೇ ದಿನ ಟೀಂ ಇಂಡಿಯಾ 248 ರನ್ ಕಲೆಹಾಕಿ ಇನ್ನೂ 52 ರನ್'ಗಳ ಹಿನ್ನೆಡೆಯಲ್ಲಿದೆ.
ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ ಅರ್ಧಶತಕ ಸಿಡಿಸಿ ಸಂಭ್ರಮಿಸಿದರೆ, ಆರ್. ಅಶ್ವಿನ್, ಜಡೇಜಾ ಕೂಡ ಹೊಸ ದಾಖಲೆಗಳನ್ನು ನಿರ್ಮಿಸಿದರು.
ಇಂದು ನಿರ್ಮಾಣವಾದ ಪ್ರಮುಖ ದಾಖಲೆಗಳು ನಿಮಗಾಗಿ...
2ನೇ ಆಟಗಾರ
ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್'ಗಳಿಸಿದ ಟೆಸ್ಟ್ ಆಟಗಾರರ ಪೈಕಿ ಪೂಜಾರ ಎರಡನೇ ಸ್ಥಾನ (22 ಇನಿಂಗ್ಸ್‌ಗಳಲ್ಲಿ 1316ರನ್), 2005-06ರಲ್ಲಿ ಆಸೀಸ್'ನ ಮಾಜಿ ನಾಯಕ ರಿಕಿ ಪಾಂಟಿಂಗ್ (23 ಇನಿಂಗ್ಸ್‌ಗಳಲ್ಲಿ 1483ರನ್) ಗರಿಷ್ಟ ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.
5ನೇ ಅರ್ಧಶತಕ
ಪ್ರಸಕ್ತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಲೋಕೇಶ್ ರಾಹುಲ್ ಐದು ಅರ್ಧಶತಕ ಸಿಡಿಸಿದ್ದಾರೆ.
3ನೇ ಸ್ಪಿನ್ನರ್
ಭಾರತ ವಿರುದ್ಧ ಟೆಸ್ಟ್'ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ನರ್ ನಾಥನ್ ಲಿಯೊನ್ (63) ವಿಕೆಟ್ ಮೂರನೇ ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (105), ವೆಸ್ಟ್ ಇಂಡೀಸ್‌ನ ಎಲ್.ಆರ್. ಗಿಬ್ಸ್ (63)ವಿಕೆಟ್ ಕ್ರಮವಾಗಿ ಮೊದಲ 2ಸ್ಥಾನ ಪಡೆದಿದ್ದಾರೆ.
3ನೇ ಆಲ್ರೌಂಡರ್:
ರವೀಂದ್ರ ಜಡೇಜಾ ಒಂದೇ ಟೆಸ್ಟ್ ಋತುವಿನಲ್ಲಿ 500 ರನ್ ಗಳಿಸಿ 50 ವಿಕೆಟ್ ವಿಶ್ವದ ಮೂರನೇ ಆಲ್ರೌಂಡರ್ ಎನ್ನುವ ಖ್ಯಾತಿಗೆ ಭಾಜನರಾಗಿದ್ದಾರೆ. ಈ ಮೊದಲು ಕಪಿಲ್ ದೇವ್ ಮತ್ತು ಮಿಚೆಲ್ ಜಾನ್ಸನ್ ಈ ಸಾಧನೆ ಮಾಡಿದ್ದರು.
ಯುವರಾಜ್ ಹಿಂದಿಕ್ಕಿದ ಅಶ್ವಿನ್:
ಟೆಸ್ಟ್ ಕ್ರಿಕೆಟ್'ನಲ್ಲಿ ಗರಿಷ್ಟ ರನ್ ಬಾರಿಸಿದ 39ನೇ ಭಾರತೀಯ ಆಟಗಾರ ಎನ್ನುವ ಕೀರ್ತಿಗೆ ಅಶ್ವಿನ್(1903) ಪಾತ್ರರಾಗಿದ್ದಾರೆ. ಈ ಮೂಲಕ ಯುವರಾಜ್ ಸಿಂಗ್(1900) ಬಾರಿಸಿದ ಸ್ಕೋರ್'ನ್ನು ಹಿಂದಿಕ್ಕಿದ್ದಾರೆ. ಯುವರಾಜ್ ಸಿಂಗ್ 1900 ರನ್ ಬಾರಿಸಲು 40 ಟೆಸ್ಟ್ ಪಂದ್ಯಗಳನ್ನಾಡಿದರೆ, ಅಶ್ವಿನ್ ತೆಗೆದುಕೊಂಡಿದ್ದು 49 ಟೆಸ್ಟ್ ಪಂದ್ಯಗಳನ್ನು. ಇನ್ನು ಅಶ್ವಿನ್ ಮುಂದಿನ ಗುರಿಯೇನಿದ್ದರೂ ವಾಸೀಂ ಜಾಫರ್(1944 ರನ್).
