Asianet Suvarna News Asianet Suvarna News

ಇಂಟರ್‌ಕಾಂಟಿನೆಂಟಲ್ ಕಪ್: ಕೀನ್ಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಗೆಲುವಿನ ಓಟ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರದ್ಧ ಗೆಲುವು ಸಾಧಿಸಿದ್ದ ಭಾರತ, ದ್ವಿತೀಯ ಪಂದ್ಯದಲ್ಲಿ ಕೀನ್ಯಾ ತಂಡವನ್ನ 3-0 ಅಂತರದಲ್ಲಿ ಮಣಿಸಿತು.

Intercontinental Cup Sunil Chhetri Double On 100th Game Helps India Beat Kenya

ಮುಂಬೈ(ಜೂನ್.5) ಇಂಟರ್‌ಕಾಂಟಿನೆಂಟಲ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಮುಂಬೈನ ಫುಟ್ಬಾಲ್ ಅರೀನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಲ್ಲಿ ಕೀನ್ಯಾ ತಂಡವನ್ನ ಭಾರತ 3-0 ಅಂತರದಲ್ಲಿ ಮಣಿಸಿತು.

ಬಲಿಷ್ಠ ಕೀನ್ಯಾ ವಿರುದ್ಧ ಕಣಕ್ಕಿಳಿದ ಭಾರತ ಕಠಿಣ ಹೋರಾಟ ನಡೆಸಿತು. ಮೊದಲಾರ್ಧದಲ್ಲಿ ಗೋಲ್‌ಗಾಗಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ ತಂಡ ಪ್ರಯತ್ನ ನಡೆಸಿತು. ಆದರೆ ಸಾಧ್ಯವಾಗಲಿಲ್ಲ. ಹೀಗಾಗಿ 45 ನಿಮಿಷಗಳ ಫಸ್ಟ್ ಹಾಫ್‌ನಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ.

ದ್ವಿತಿಯಾರ್ಧದಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡಿದ ಭಾರತ, 68ನೇ ನಿಮಿಷದಲ್ಲಿ ಗೋಲಿನ ಖಾತೆ ಆರಂಭಿಸಿತು. 100ನೇ ಅಂತರಾಷ್ಟ್ರೀಯ ಪಂದ್ಯವಾಡಿದ ನಾಯಕ ಸುನಿಲ್ ಚೆಟ್ರಿ ಮೊದಲ ಗೋಲು ಸಿಡಿಸಿ ಸಂಭ್ರಮಿಸಿದರು. ಇಷ್ಟೇ ಅಲ್ಲ ತಮ್ಮ ಓಟ್ಟು 60 ಗೋಲು ಸಿಡಿಸಿದ ಸಾಧನೆ ಮಾಡಿದರು.

ಕೀನ್ಯಾ ತಂಡದ ಆಕ್ರಮಣಗಳನ್ನ ತಡೆಯುವಲ್ಲಿ ಭಾರತ ಯಶಸ್ವಿಯಾಯಿತು. 78ನೇ ನಿಮಿಷದಲ್ಲಿ ಜೇಜೆ ಲಾಲ್‌ಪೆಕ್ಲುವಾ ಗೋಲು ಸಿಡಿಸಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು. 90 ನಿಮಿಷದ ಬಳಿಕ ಇಂಜುರಿ ಟೈಮ್‌ನಲ್ಲಿ ಮತ್ತೆ ಅಬ್ಬರಿಸಿದ ಚೆಟ್ರಿ ತಮ್ಮ 2ನೇ ಗೋಲು ಸಿಡಿಸಿದರು. ಈ ಮೂಲಕ ಭಾರತ 3-0 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. 

ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ 5-0 ಅಂತರದಲ್ಲಿ ಗೆಲುವು ದಾಖಲಿಸಿದ್ದ ಭಾರತ ಇದೀಗ ಕೀನ್ಯಾ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ ಪ್ರವೇಶವನ್ನ ಸುಗಮವಾಗಿಸಿದೆ. 

 

 

ವಿಶೇಷ ಅಂದರೆ ಸುನಿಲ್ ಚೆಟ್ರಿ ಮನವಿಗೆ ಸ್ಪಂದಿಸಿದ ಕ್ರೀಡಾಭಿಮಾನಿಗಳು, ಕ್ರೀಂಡಾಣಕ್ಕೆ ಆಗಮಿಸಿ ಭಾರತ ಫುಟ್ಬಾಲ್ ತಂಡವನ್ನ ಬೆಂಬಲಿಸಿದರು. ಫುಟ್ಬಾಲ್ ತಂಡದ ಮಾಜಿ ನಾಯಕರಾದ ಬೈಚುಂಗ್ ಭುಟಿಯಾ ಹಾಗು ಐಎಮ್ ವಿಜಯನ್ ಸೇರಿದಂತೆ ಹಲವು ಕ್ರೀಡಾಪಟುಗಳು ಆಗಮಿಸಿದ್ದರು.  ಗೆಲುವಿನ ಬಳಿಕ ಭಾರತ ತಂಡ ಕ್ರೀಡಾಭಿಮಾನಿಗಳಿಗೆ ಧನ್ಯವಾದ ಹೇಳಿತು.

 

 

Follow Us:
Download App:
  • android
  • ios