Asianet Suvarna News Asianet Suvarna News

INDvWI: ಬೌಲರ್‌ಗಳ ಪರಾಕ್ರಮ; ವಿಂಡೀಸ್ ವಿರುದ್ಧ ಭಾರತಕ್ಕೆ ಗೆಲುವು!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಭಾರತ ಬ್ಯಾಟಿಂಗ್ ಸಮಸ್ಯೆ ಎದುರಿಸಿತು. ಸುಲಭ ಗೆಲುವು ಚೇಸ್ ಮಾಡಲು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಹರಸಾಹಸ ಪಟ್ಟರು. ಆದರೆ ಬೌಲರ್‌ಗಳ ಪರಾಕ್ರಮದಿಂದ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಪಂದ್ಯದ  ಹೈಲೈಟ್ಸ್ ಇಲ್ಲಿದೆ.

INDvWI 1st t20 Team India defeat west indies by wickets at lauderhill
Author
Bengaluru, First Published Aug 3, 2019, 11:11 PM IST

ಲೌಡರ್‌ಹಿಲ್(ಆ.03): ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸೋಲಿನಿಂದ ನಿರಾಸೆಗೊಂಡಿದ್ದ ಟೀಂ ಇಂಡಿಯಾ ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್ ಗೆಲುವು ಸಾಧಿಸಿದೆ.  ಮೊದಲ ಪಂದ್ಯದಲ್ಲಿ ಬೌಲರ್‌ಗಳ ಪರಾಕ್ರಮದಿಂದ ಭಾರತ ಗೆಲುವಿನ ನಗೆ ಬೀರಿತು. ಆದರೆ ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಸಮಸ್ಯೆ ಮತ್ತೆ ತಲೆದೋರಿದೆ.

ಇದನ್ನೂ ಓದಿ: ಭಾರತ ಕೋಚ್‌ ಆಗುವ ಆಸೆ ಇದೆ: ಗಂಗೂಲಿ!

ಗೆಲುವಿಗೆ 96 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಇಂಜುರಿಯಿಂದ ಕಮ್‌ಬ್ಯಾಕ್ ಮಾಡಿದ ಧವನ್ ಕೇವಲ 1 ರನ್ ಸಿಡಿಸಿ ಔಟಾದರು. ಆದರೆ ರೋಹಿತ್ ಸಿಡಿಸಿದ 24 ರನ್ ನೆರವಿನಿಂದ ಟೀಂ ಇಂಡಿಯಾ ಉಸಿರಾಡಿತು. ಧೋನಿ ಸ್ಥಾನ ತುಂಬಲ್ಲ ಆಟಾಗರ ಎನಿಸಿಕೊಂಡಿದ್ದ ರಿಷಬ್ ಪಂತ್ ಶೂನ್ಯಕ್ಕೆ ಔಟಾದರು. ಇದರೊಂದಿಗೆ ಪಂತ್ ಮೇಲಿನ  ಭರವಸೆ ಹುಸಿಯಾಯಿತು.

ಇದನ್ನೂ ಓದಿ: ನಾನು ದೇಶಕ್ಕಾಗಿ ಆಡುತ್ತೇನೆಯೇ ಹೊರತು, ತಂಡಕ್ಕಾಗಿ ಅಲ್ಲ': ರೋಹಿತ್ ಮಾತಿನ ಮರ್ಮವೇನು..?

ಕನ್ನಡಿಗ ಮನೀಶ್ ಪಾಂಡೆ 19 ರನ್ ಸಿಡಿಸಿ ಸಿಕ್ಸರ್ ಹೊಡೆತ ಕೈಹಾಕಿದರು. ಆದರೆ ಕ್ಲೀನ್ ಬೋಲ್ಡ್ ಆಗೋ ಮೂಲಕ ಪಾಂಡೆಯ ಸ್ಥಾನ ಕೂಡ ಅಲುಗಾಡ ತೊಡಗಿದೆ. ಪಾಂಡೆ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡ 19 ರನ್ ಸಿಡಿಸಿ ನಿರ್ಗಮಿಸಿದರು. ಸುಲಭ ಟಾರ್ಗೆಟ್ ಕೂಡ ಟೀಂ ಇಂಡಿಯಾಗೆ ಕಷ್ಟವಾಗತೊಡಗಿತು. ಭರವಸೆಯ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು. 

ಕ್ರುನಾಲ್ ಪಾಂಡ್ಯ 12 ರನ್ ಸಿಡಿಸಿ ಔಟಾದರು.  ರವೀಂದ್ರ ಜಡೇಜಾ ಅಜೇಯ 10 ರನ್ ಸಿಡಿಸಿದರೆ, ವಾಶಿಂಗ್ಟನ್ ಸುಂದರ್ ಸಿಡಿಸಿದ ಸಿಕ್ಸರ್ ನೆರವಿನಿಂದ ಟೀಂ ಇಂಡಿಯಾ 17.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 


 

Follow Us:
Download App:
  • android
  • ios