ಇಂಡೋನೇಷ್ಯಾ ಓಪನ್: ಭಾರತದ ಹೋರಾಟ ಅಂತ್ಯ
ಭಾರತದ ಅಗ್ರಶ್ರೇಯಾಂಕಿತ ಆಟಗಾರ್ತಿ ಸಿಂಧು, ಚೀನಾದ ಹೇ ಬಿಂಗ್ ಜಿವೋ ಎದುರು 21-14, 21-15 ನೇರ ಸೆಟ್’ಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾದ ಚೀನಾದ ಆಟಗಾರ್ತಿ ಪಂದ್ಯದುದ್ದಕ್ಕೂ ಸಿಂಧು ವಿರುದ್ಧ ಪ್ರಾಬಲ್ಯ ಮೆರೆದರು. ಚಾಣಾಕ್ಷ ಸರ್ವ್ ಹಾಗೂ ಬಲಿಷ್ಠ ಆಕ್ರಮಣದ ಮೂಲಕ ರಿಯೊ ಬೆಳ್ಳಿ ಪದಕ ವಿಜೇತೆ ಸಿಂಧುಗೆ ಚೀನಾ ಆಟಗಾರ್ತಿ ಶಾಕ್ ನೀಡಿದರು.
ಜಕಾರ್ತ್[ಜು.06]: ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಪಿ.ವಿ. ಸಿಂಧು, ಎಚ್.ಎಸ್ ಪ್ರಣಯ್ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್’ಫೈನಲ್’ನಲ್ಲಿ ಮುಗ್ಗರಿಸುವುದರೊಂದಿಗೆ ಭಾರತದ ಹೋರಾಟ ಅಂತ್ಯವಾಗಿದೆ.
ಭಾರತದ ಅಗ್ರಶ್ರೇಯಾಂಕಿತ ಆಟಗಾರ್ತಿ ಸಿಂಧು, ಚೀನಾದ ಹೇ ಬಿಂಗ್ ಜಿವೋ ಎದುರು 21-14, 21-15 ನೇರ ಸೆಟ್’ಗಳಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾದ ಚೀನಾದ ಆಟಗಾರ್ತಿ ಪಂದ್ಯದುದ್ದಕ್ಕೂ ಸಿಂಧು ವಿರುದ್ಧ ಪ್ರಾಬಲ್ಯ ಮೆರೆದರು. ಚಾಣಾಕ್ಷ ಸರ್ವ್ ಹಾಗೂ ಬಲಿಷ್ಠ ಆಕ್ರಮಣದ ಮೂಲಕ ರಿಯೊ ಬೆಳ್ಳಿ ಪದಕ ವಿಜೇತೆ ಸಿಂಧುಗೆ ಚೀನಾ ಆಟಗಾರ್ತಿ ಶಾಕ್ ನೀಡಿದರು.
ಇನ್ನು ಮತ್ತೊಂದು ಪಂದ್ಯದಲ್ಲಿ ಭಾರತದ ಮತ್ತೋರ್ವ ಸ್ಟಾರ್ ಆಟಗಾರ ಎಚ್.ಎಸ್ ಪ್ರಣಯ್ ಚೀನಾದ ಶೈ ಯೂಕಿ ಎದುರು 21-17, 21-18 ನೇರ ಸೆಟ್’ಗಳಲ್ಲಿ ಸೋಲುಂಡರು. ಪ್ರಣಯ್ ಸೋಲಿನೊಂದಿಗೆ ಇಂಡೋನೇಷ್ಯಾ ಓಪನ್’ನಲ್ಲಿ ಭಾರತದ ಹೋರಾಟ ಅಂತ್ಯವಾದಂತೆ ಆಗಿದೆ. ಭಾರತದ ಯಾವೊಬ್ಬ ಬ್ಯಾಡ್ಮಿಂಟನ್ ಪಟುವೂ ಈ ಬಾರಿ ಸೆಮಿಫೈನಲ್ ಪ್ರವೇಶಿಸಲು ಸಫಲವಾಗಲಿಲ್ಲ.
ಇದಕ್ಕೂ ಮೊದಲು ಕೀದಾಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಹೊರಬಿದ್ದು ಆಘಾತ ಅನುಭವಿಸಿದ್ದರೆ, ಸೈನಾ 16ರ ಘಟ್ಟದಲ್ಲಿ ಮುಗ್ಗರಿಸಿದ್ದರು.