ಇಂಡೋನೇಷ್ಯಾ ಓಪನ್: ಬರ್ತ್ ಡೇ ಹುಡುಗಿ ಪಿವಿ ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Indonesia Open: Birthday girl PV Sindhu enters quarterfinals
Highlights

23ನೇ ವರ್ಷದ ಹುಟ್ಟುಹಬ್ಬವನ್ನ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಸ್ಮರಣೀಯವಾಗಿಸಿದ್ದಾರೆ. ಹುಟ್ಟುಹಬ್ಬದ ದಿನ ಇಂಡೋನೇಷಿಯಾ ಓಪನ್ ಬ್ಯಾಡ್ಮಿಂಟ್ ಟೂರ್ನಿಯಲ್ಲಿ ಸಿಂಧು, ಕ್ವಾರ್ಟರ್ ಫೈನಲ್‌ ಪ್ರವೇಶಿದ್ದಾರೆ. ಸಿಂಧು ರೋಚಕ ಹೋರಾಟದ ವಿವರ ಇಲ್ಲಿದೆ.

ಜಕರ್ತಾ(ಜು.05): ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಹುಟ್ಟಹಬ್ಬಕ್ಕೆ ಡಬಲ್ ಧಮಾಕ. 23ನೇ ವರ್ಷಕ್ಕೆ ಕಾಲಿಟ್ಟ ಪಿವಿ ಸಿಂಧು, ಇಂಡೋನೇಷ್ಯಾ ಒಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಜಪಾನ್‌ನ ಅಯಾ ಒಹೋರಿ ವಿರುದ್ಧ ನಡೆದ ಪಂದ್ಯದಲ್ಲಿ ಸಿಂಧು, 21-17, 21-14 ಅಂತರದಲ್ಲಿ ಗೆಲವು ಸಾಧಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲಿ ಸಿಂಧು, ಥೈಲೆಂಡ್‌ನ ಬುಸಾನನ್ ಒಂಗ್ಬಾಮ್ರುಪಾನ್ ಅಥವಾ ಚೀನಾದ ಬಿಂಗ್ಜಾವೋ ಅವರನ್ನ ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಹೆಚ್ ಎಸ್ ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಜಪಾನ್ ವಾಂಗ್ ಟ್ಸು ವಿ ವಿರುದ್ಧ 21-23,15-21 ಹಾಗೂ 21-13 ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಆದರೆ ಭಾರತದ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

loader