Asianet Suvarna News Asianet Suvarna News

ಇಂಡೋನೇಷ್ಯಾ ಓಪನ್: ಫೈನಲ್‌ಗೇರಿದ ಸಿಂಧು

ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಈ ಋತುವಿನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದು, ಇಂಡೋನೇಷ್ಯಾ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.ಈ ಕುರಿತಾದ ವರದಿ ಇಲ್ಲಿದೆ ನೋಡಿ..

Indonesia Open 2019 Indian Badminton star PV Sindhu eases into final
Author
Jakarta, First Published Jul 21, 2019, 11:17 AM IST

ಜಕಾರ್ತ(ಜು.21): ಒಲಿಂಪಿಕ್ ಬೆಳ್ಳಿ ವಿಜೇತೆ ಭಾರತದ ತಾರಾ ಶಟ್ಲರ್ ಪಿ.ವಿ. ಸಿಂಧು, ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಸಿಂಧು ಈ ಋತುವಿನಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದಾರೆ. ಈ ವರ್ಷದಲ್ಲಿ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ಹುಮ್ಮಸ್ಸಿನಲ್ಲಿ ಸಿಂಧು ಇದ್ದಾರೆ. 

ಇಂಡೋನೇಷ್ಯಾ ಓಪನ್: ಸಿಂಧು ಸೆಮೀಸ್‌ಗೆ ಲಗ್ಗೆ

ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು, ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಚೆನ್ ಯುಫಿ ವಿರುದ್ಧ 21-19, 21-10 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ವಿಶ್ವ ನಂ.5 ನೇ ಶ್ರೇಯಾಂಕಿತ ಆಟಗಾರ್ತಿ ಸಿಂಧು, ಈ ಋತುವಿನಲ್ಲಿ ಸಿಂಗಾಪುರ ಓಪನ್ ಮತ್ತು ಇಂಡಿಯಾ ಓಪನ್ ಟೂರ್ನಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಸಿಂಧು, 4ನೇ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ರನ್ನು ಎದುರಿಸಲಿದ್ದಾರೆ. 

ಯಮಗುಚಿ ವಿರುದ್ಧ ಸಿಂಧು 10-4 ರ ಮುಖಾಮುಖಿ ಗೆಲುವು ಸಾಧಿಸಿದ್ದಾರೆ. ಈ ವರ್ಷದಲ್ಲಿ ಚೀನಾದ ಶಟ್ಲರ್ ಚೆನ್ ಯುಫಿ ಆಸ್ಟ್ರೇಲಿಯಾ, ಸ್ವಿಸ್ ಮತ್ತು ಆಲ್ ಇಂಗ್ಲೆಂಡ್ ಓಪನ್ ಟ್ರೋಫಿ ಗೆದ್ದಿದ್ದರು. ಒಂದು ಹಂತದಲ್ಲಿ 19-19 ರಿಂದ ಇಬ್ಬರೂ ಶಟ್ಲರ್‌ಗಳು ಸಮಬಲದ ಹೋರಾಟ ನಡೆಸಿದ್ದರು. ನಂತರದ ಅವಧಿಯಲ್ಲಿ ಸಿಂಧು ಅದ್ಭುತ ಸ್ಮ್ಯಾಶ್‌ಗಳ ಮೂಲಕ ಚೀನಾ ಶಟ್ಲರ್‌ರನ್ನು ಹಿಂದಿಕ್ಕಿದರು.

Follow Us:
Download App:
  • android
  • ios