ಸಿಂಧು ಮಣಿಸಿ ಸಮೀಸ್'ಗೆ ಲಗ್ಗೆಯಿಟ್ಟ ಸೈನಾ

First Published 26, Jan 2018, 8:21 PM IST
Indonesia Masters Saina Nehwal sinks PV Sindhu to sail into semifinal
Highlights

ಕಳೆದ ವರ್ಷ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್'ನಲ್ಲಿ ಕೂಡಾ ಸೈನಾ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಸೆಮಿಫೈನಲ್‌'ನಲ್ಲಿ ಸೈನಾ ಥಾಯ್ಲೆಂಡ್‌'ನ ರಚನಾಕ್ ಇಂಟಾನನ್'ರನ್ನು ಎದುರಿಸಲಿದ್ದಾರೆ.

ಜಕಾರ್ತ(ಜ.26): ಮಾಜಿ ವಿಶ್ವ ನಂ.1 ಭಾರತದ ಸೈನಾ ನೆಹ್ವಾಲ್, ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ 500 ಪಂದ್ಯಾವಳಿಯ ಮಹಿಳಾ ಸಿಂಗಲ್ಸ್‌'ನ ಕ್ವಾರ್ಟರ್‌ ಫೈನಲ್'ನಲ್ಲಿ ಪಿ.ವಿ. ಸಿಂಧು ಎದುರು ಗೆಲುವು ಪಡೆದು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಂದು ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಸೈನಾ 21-13, 21-19 ಗೇಮ್‌'ಗಳಿಂದ ಸಿಂಧು ವಿರುದ್ಧ ಜಯ ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ಕಳೆದ ವರ್ಷ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್'ಶಿಪ್'ನಲ್ಲಿ ಕೂಡಾ ಸೈನಾ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಸೆಮಿಫೈನಲ್‌'ನಲ್ಲಿ ಸೈನಾ ಥಾಯ್ಲೆಂಡ್‌'ನ ರಚನಾಕ್ ಇಂಟಾನನ್'ರನ್ನು ಎದುರಿಸಲಿದ್ದಾರೆ.

ರಚನಾಕ್, ಕ್ವಾರ್ಟರ್‌'ಫೈನಲ್‌'ನಲ್ಲಿ ಜಪಾನ್‌ನ ನೊಜೊಮಿ ಒಕುರಾ ಎದುರು ಗೆಲುವು ಪಡೆದು ಸೆಮೀಸ್ ಪ್ರವೇಶಿಸಿದರು.

loader