ಇಂಡೋನೇಷ್ಯಾ ಓಪನ್: ಸೆಮೀಸ್’ಗೆ ಸೈನಾ ನೆಹ್ವಾಲ್

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್'ನ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಪೂರ್ನಾಪಾವಿ ಚೊಚುವಾಂಗ್ ವಿರುದ್ಧ 21-17, 21-18 ನೇರ ಗೇಮ್‌ಗಳಲ್ಲಿ ಗೆದ್ದು, ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟರು. 

Indonesia Masters 2019 Saina Nehwal sails into semifinals

ಜಕಾರ್ತ[ಜ.26]: ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್, ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ್ದಾರೆ. ಆದರೆ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀ ಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿ ನಿರಾಸೆಅನುಭವಿಸಿದರು. 

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್'ನ ಕ್ವಾರ್ಟರ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ಪೂರ್ನಾಪಾವಿ ಚೊಚುವಾಂಗ್ ವಿರುದ್ಧ 21-17, 21-18 ನೇರ ಗೇಮ್‌ಗಳಲ್ಲಿ ಗೆದ್ದು, ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟರು. 

ಮತ್ತೊಂದು ಸಿಂಗಲ್ಸ್‌ನಲ್ಲಿ ಸಿಂಧು, ಸ್ಪೇನ್‌ನ ಕ್ಯಾರೋಲಿನಾ ಮರಿನ್ ಎದುರು 11-21, 12-21 ನೇರ ಗೇಮ್‌ಗಲ್ಲಿ ಪರಾಭವಗೊಂಡರು. ಪುರುಷರ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಶ್ರೀಕಾಂತ್, ಸ್ಥಳೀಯ ಶಟ್ಲರ್ ಜೋ ನಾಥನ್ ಕ್ರಿಸ್ಟಿ ಎದುರು 18-21, 19-21 ನೇರ ಗೇಮ್‌ಗಳಿಂದ ಸೋಲುಂಡು ಹೊರಬಿದ್ದರು. 
 
Latest Videos
Follow Us:
Download App:
  • android
  • ios