ಹಾಕಿ: ಸ್ಪೇನ್ ಪ್ರವಾಸ ಯುವ ಆಟಗಾರ್ತಿಯರಿಗೆ ಸುವರ್ಣಾವಕಾಶ: ರಾಣಿ ರಾಂಪಾಲ್

Indian womens hockey captain Rani Rampal feels Spain tour a chance for youngsters to get selected in World Cup squad
Highlights

ಯುವ ಆಟಗಾರ್ತಿಯರು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇನ್ನು ಸ್ಪೇನ್ ಪ್ರವಾಸದಲ್ಲೂ ಸ್ಥಿರ ಪ್ರದರ್ಶನ ತೋರಿದರೆ, ಮುಂದಿನ ತಿಂಗಳಿನಿಂದ ಲಂಡನ್’ನಲ್ಲಿ ಜರುಗಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸುವರ್ಣಾವಕಾಶವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನವದೆಹಲಿ[ಜೂ.09]: ಮುಂಬರುವ ಹಾಕಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯುವ ಆಟಗಾರ್ತಿಯರಿಗೆ ಸ್ಪೇನ್ ಪ್ರವಾಸವು ನೆರವಾಗಲಿದೆ ಎಂದು ಭಾರತ ವನಿತೆಯರ ತಂಡದ ನಾಯಕಿ ರಾಣಿ ರಾಂಪಾಲ್ ಹೇಳಿದ್ದಾರೆ.

20 ಆಟಗಾರ್ತಿಯರನ್ನೊಳಗೊಂಡ ತಂಡ ಇಲ್ಲಿನ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನದಿಂದ ಸ್ಪೇನ್’ಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ರಾಂಪಾಲ್, ’ಯುವ ಆಟಗಾರ್ತಿಯರು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇನ್ನು ಸ್ಪೇನ್ ಪ್ರವಾಸದಲ್ಲೂ ಸ್ಥಿರ ಪ್ರದರ್ಶನ ತೋರಿದರೆ, ಮುಂದಿನ ತಿಂಗಳಿನಿಂದ ಲಂಡನ್’ನಲ್ಲಿ ಜರುಗಲಿರುವ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸುವರ್ಣಾವಕಾಶವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಮುಂದೆ ಜುಲೈನಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಹಾಗೂ ಆಗಸ್ಟ್’ನಲ್ಲಿ ಜರುಗಲಿರುವ ಏಷ್ಯನ್ ಗೇಮ್ಸ್’ನಲ್ಲಿ ಗಮನಾರ್ಹ ಪ್ರದರ್ಶನ ತೋರಲು ಸ್ಪೇನ್ ಪ್ರವಾಸ ಉತ್ತಮ ಅವಕಾಶವಾಗಿದೆ ಎಂದು ರಾಣಿ ಹೇಳಿದ್ದಾರೆ.
ಜೂನ್ 12ರಿಂದ ಸ್ಪೇನ್’ನ ಮ್ಯಾಡ್ರೀಡ್’ನಲ್ಲಿ   ಭಾರತ ತಂಡವು 5 ಪಂದ್ಯಗಳ ಸರಣಿಯನ್ನು ಆಡಲಿದೆ.
 

loader