ಟೆಸ್ಟ್ ಅಂಪೈರಿಂಗ್‌ಗೆ ಪದಾರ್ಪಣೆ ಮಾಡಲು ರೆಡಿಯಾದ ನಿತಿನ್
ಭಾರತದ ನಿತಿನ್ ಮೆನನ್ ಟೆಸ್ಟ್ ಕ್ರಿಕೆಟ್‌ಗೆ ಅಂಪೈರ್ ಆಗಿ ಪದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿರುವ ನಿತಿನ್ ಇದೇ ಮೊದಲ ಬಾರಿಗೆ ರೆಡ್ ಬಾಲ್ ಕ್ರಿಕೆಟ್‌ಗೆ ತೀರ್ಪುಗಾರರಾಗಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ[ಸೆ.04]: ಭಾರತೀಯ ಅಂಪೈರ್ ನಿತಿನ್ ಮೆನನ್ ನ.27ರಂದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಡೆಹ್ರಾಡೂನ್‌ನಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಹಾಗೂ ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಮೈದಾನದ ಅಂಪೈರ್ ಆಗಿ ನಿತಿನ್ ಕಾರ್ಯನಿರ್ವಹಿಸಲಿದ್ದಾರೆ.
ಕೆಟ್ಟ ಅಂಪೈರಿಂಗ್: ಕ್ರಿಸ್, ವಿಲ್ಸನ್ ಆ್ಯಷಸ್‌ನಿಂದ ಔಟ್!
ಮಧ್ಯ ಪ್ರದೇಶ ಪರ ಅಂಡರ್ 16, 19, 23 ಹಾಗೂ ಲಿಸ್ಟ್ ‘ಎ’ ಪಂದ್ಯಗಳಲ್ಲಿ ಆಡಿದ್ದ ನಿತಿನ್, 2006ರಲ್ಲಿ ಬಿಸಿಸಿಐನ ಅಖಿಲ ಭಾರತ ಅಂಪೈರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 2007-08ರ ದೇಸಿ ಋುತುವಿನಿಂದ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಆರಂಭಿಸಿದರು.
3ನೇ ಅಂಪೈರ್‌ನಿಂದ ನೋಬಾಲ್ ತೀರ್ಪು : ಐಸಿಸಿ ಪ್ರಯೋಗ!
57 ಪ್ರಥಮ ದರ್ಜೆ ಪಂದ್ಯಗಳ ಜತೆ 22 ಅಂತಾರಾಷ್ಟ್ರೀಯ ಏಕದಿನ ಹಾಗೂ 9 ಟಿ20, 40 ಐಪಿಎಲ್ ಪಂದ್ಯಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ.