ಗುವಾಹಟಿ(ಅ.02): ದೇಶದ ಅತ್ಯಂತ ದೊಡ್ಡ ಫುಟ್ಬಾಲ್ ಹಬ್ಬ ಇಂಡಿಯನ್ ಸೂಪರ್ ಲೀಗ್​ಗೆ ನಿನ್ನೆ ಅದ್ದೂರಿಯಾಗಿ ಚಾಲನೆ ನೀಡಲಾಯ್ತು. 

ಗುವಾಹಟಿಯಲ್ಲಿ ಸೆಲೆಬ್ರೇಟಿಗಳ ದಂಡಿನ ನಡುವೆ ಉದ್ಘಾಟನಾ ಸಮಾರಂಭ ಮತ್ತು ಮೊದಲ ಪಂದ್ಯ ನಡೆಯಿತು. 

ಬಾಲಿವುಡ್ ತಾರೆಗಳಾದ ಜಾಕ್ವಲಿನ್ ಫರ್ನಾಂಡೀಸ್ ಹಾಗೂ ವರುಣ್ ಧವನ್ ನೃತ್ಯ ಮಾಡಿದರು. 500ಕ್ಕೂ ಅಧಿಕ ಕಲಾವಿದರು ಪ್ರದರ್ಶನ ನೀಡಿದ್ರು.

ಆಲಿಯಾ ಭಟ್ ಕಾರ್ಯಕ್ರಮ ಸಹ ಅದ್ಭುತವಾಗಿತ್ತು. ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ, ಪಿವಿ ಸಿಂಧು ಉಪಸ್ಥಿತರಿದ್ದರು.