ಏಷ್ಯನ್‌ ಕೂಟಕ್ಕೆ ಭಾರತ ರಿಲೇ ತಂಡಕ್ಕೆ ಅರ್ಹತೆ

ಏ.21ರಿಂದ 24ರ ವರೆಗೂ ಕತಾರ್‌ನ ದೋಹಾದಲ್ಲಿ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ 51 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶನಿವಾರ ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದ್ಯುತಿ, ಹೀನಾ, ಅರ್ಚನಾ ಹಾಗೂ ಕೆ.ರಂಗಾ ಅವರನ್ನೊಳಗೊಂಡ ತಂಡ 44.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. 

Indian Star sprint Dutee helps relay team qualify for Asian Championships

ಪಟಿಯಾಲ(ಏ.14): ದ್ಯುತಿ ಚಾಂದ್‌ ನೇತೃತ್ವದ ಭಾರತ ಮಹಿಳಾ 4*100 ಮೀ. ರಿಲೇ ತಂಡ ಮುಂಬರುವ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡಿದೆ. 

ಏ.21ರಿಂದ 24ರ ವರೆಗೂ ಕತಾರ್‌ನ ದೋಹಾದಲ್ಲಿ ಚಾಂಪಿಯನ್‌ಶಿಪ್‌ ನಡೆಯಲಿದ್ದು, ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ 51 ಸದಸ್ಯರ ತಂಡವನ್ನು ಪ್ರಕಟಿಸಿದೆ. ಶನಿವಾರ ಇಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ದ್ಯುತಿ, ಹೀನಾ, ಅರ್ಚನಾ ಹಾಗೂ ಕೆ.ರಂಗಾ ಅವರನ್ನೊಳಗೊಂಡ ತಂಡ 44.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. 

ಏಷ್ಯನ್‌ ಕೂಟಕ್ಕೆ ಅರ್ಹತೆ ಪಡೆಯಲು 44.50 ಸೆಕೆಂಡ್‌ಗಳ ಸಮಯ ನಿಗದಿ ಪಡಿಸಲಾಗಿತ್ತು. ಇದೇ ವೇಳೆ ಮಹಿಳೆಯರ 800 ಮೀ. ಓಟಕ್ಕೆ ಕೆ.ಗೋಮತಿ ಸಹ ಅರ್ಹತೆ ಗಿಟ್ಟಿಸಿದ್ದಾರೆ.

Latest Videos
Follow Us:
Download App:
  • android
  • ios