ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ನಿರೀಕ್ಷೆಯಂತೆ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಭಾರತದ ಮಡಿಲಿಗೆ ಈಗಾಗಲೇ 11 ಪದಕಗಳು ಸೇರಿವೆ.
ಜಕಾರ್ತ: ಶೂಟಿಂಗ್‌ನಲ್ಲಿ ರಾಹಿ ಸಾರ್ನೊಬತ್ ಸ್ವರ್ಣದ ಪದಕ ಗೆದ್ದಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಡಿಲಿಗೆ ಮತ್ತೊಂದು ಪದಕ ಸೇರಿಕೊಂಡಿದೆ.
ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ 25 ಎಂ. ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ರಾಹಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಕೀರ್ತಿಗೆ ರಾಹಿ ಪಾತ್ರರಾಗಿದ್ದಾರೆ.
http://
ಇದುವರೆಗೂ ಭಾರತ 11 ಪದಕಗಳನ್ನು ಮುಡಿಗೇರಿಸಿಕೊಂಡಿದ್ದು, ನಾಲ್ಕು ಚಿನ್ನ, 3 ಬೆಳ್ಳಿ ಮತ್ತು 4 ಕಂಚನ್ನು ಗೆದ್ದಿದೆ.
