2007ರಲ್ಲಿ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಗೆ ತೆರಳುವ ಮುನ್ನ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರುಪಿಂದರ್, ಭಾರತವನ್ನು ಪ್ರತಿನಿ ಧಿಸುತ್ತಿದ್ದರು

ಮೆಲ್ಬರ್ನ್(ಮಾ.06): ಏ.4ರಿಂದ ಗೋಲ್ಡ್ಕೋಸ್ಟ್'ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಸ್ಟ್ರೇಲಿಯಾ ಕುಸ್ತಿ ತಂಡ ಪ್ರಕಟಗೊಂಡಿದೆ.

ತಂಡದಲ್ಲಿ ಭಾರತ ಮೂಲದ ರುಪಿಂದರ್ ಕೌರ್ ಸ್ಥಾನ ಪಡೆದಿದ್ದಾರೆ. ರುಪಿಂದರ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ 48 ಕೆಜಿ ವಿಭಾಗದಲ್ಲಿ ಅವರು ಚಿನ್ನ

ಗೆದ್ದಿದ್ದರು. 2007ರಲ್ಲಿ ವಿದ್ಯಾಭ್ಯಾಸಕ್ಕಾಗಿ ಆಸ್ಟ್ರೇಲಿಯಾಗೆ ತೆರಳುವ ಮುನ್ನ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರುಪಿಂದರ್, ಭಾರತವನ್ನು ಪ್ರತಿನಿ ಧಿಸುತ್ತಿದ್ದರು. 2012ರಲ್ಲಿ ಆಸ್ಟ್ರೇಲಿಯಾ ಕುಸ್ತಿ ಸಂಸ್ಥೆಗೆ ಆಯ್ಕೆಯಾದ ಅವರು, 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದರು. 2016ರಲ್ಲಿ ತಾಯಿಯಾದ ರುಪಿಂದರ್, 1 ವರ್ಷ ಕುಸ್ತಿಯಿಂದ ದೂರವಿದ್ದರು.