ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ಭಾರತ ತಂಡ, ಐಸಿಸಿ ಕೊಡಮಾಡುವ ₹ 6.5 ಕೋಟಿ ನಗದು ಪುರಸ್ಕಾರಕ್ಕೂ ಭಾಜನವಾಗಿದೆ.

ಮುಂಬೈ(ಮಾ.28): ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದ ಟೀಂ ಇಂಡಿಯಾ ಸದಸ್ಯರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಲಾ ₹ 50 ಲಕ್ಷ ಬಹುಮಾನ ಘೋಷಿಸಿದೆ.

ಇನ್ನು ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ 25 ಲಕ್ಷ ರೂಪಾಯಿ ಪಡೆದರೆ, ತಂಡದ ಬೆಂಬಲಿತ ಸಿಬ್ಬಂದಿ ತಲಾ 15 ಲಕ್ಷ ರೂಪಾಯಿ ಬಹುಮಾನಕ್ಕೆ ಭಾಜನವಾಗಿದೆ.

ಇಂದು ಮುಕ್ತಾಯ ಕಂಡ ನಾಲ್ಕನೇ ಟೆಸ್ಟ್‌ನಲ್ಲಿ 8 ವಿಕೆಟ್ ಗೆಲುವಿನೊಂದಿಗೆ 2-1ರಿಂದ ಸರಣಿ ಜಯಿಸಿದ ಭಾರತ ತಂಡ ಆ ಮೂಲಕ ಐಸಿಸಿ ಟೆಸ್ಟ್ ಚಾಂಪಿಯನ್ ಟ್ರೋಫಿಯನ್ನೂ ತನ್ನದಾಗಿಸಿಕೊಂಡಿತು.

ಏತನ್ಮಧ್ಯೆ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡ ಭಾರತ ತಂಡ, ಐಸಿಸಿ ಕೊಡಮಾಡುವ ₹ 6.5 ಕೋಟಿ ನಗದು ಪುರಸ್ಕಾರಕ್ಕೂ ಭಾಜನವಾಗಿದೆ.