ನವದೆಹಲಿ[ಸೆ.23]: ವಿದೇಶಿ ಪ್ರವಾಸದಲ್ಲಿ ಭರ್ಜರಿ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಸಿಹಿ ಸುದ್ದಿಯೊಂದನ್ನು ಕ್ರಿಕೆಟ್ ಆಡಳಿತ ಸಮಿತಿ[CoA] ನೀಡಿದ್ದು, ಭಾರತ ಕ್ರಿಕೆಟ್‌ ತಂಡದ ವಿದೇಶ ಪ್ರವಾಸಗಳ ವೇಳೆ ಆಟ​ಗಾ​ರರ ದಿನ​ಭತ್ಯೆಯನ್ನು ಬಿಸಿ​ಸಿಐ ಡಬಲ್ ಮಾಡಿದೆ.

ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?

ಸದ್ಯ ಪ್ರತಿ ದಿನ 125 ಡಾಲರ್‌ (8,900 ರು.) ಪಡೆ​ಯು​ತ್ತಿ​ರುವ ಆಟ​ಗಾ​ರರು, ಮುಂದಿನ ವಿದೇಶಿ ಪ್ರವಾಸಗಳಿಂದ 250 ಡಾಲರ್‌ (17,800 ರು.) ಗಳಿಸ​ಲಿ​ದ್ದಾರೆ. ಆದರೆ ಭಾರತದಲ್ಲಿ ಪಡೆಯುತ್ತಿದ ದಿನಭತ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್ ಪ್ರಕಟಿಸಿದ ಆಫ್ರಿದಿ; ನಾಲ್ವರಲ್ಲಿ ಒರ್ವ ಭಾರತೀಯನಿಗೆ ಸ್ಥಾನ !

ಭಾರತ ತಂಡವು ಕಳೆದ ವರ್ಷಾಂತ್ಯದ ವೇಳೆಗೆ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. ಇನ್ನು ಕಳೆದ ತಿಂಗಳು ನಡೆದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚಾಂಪಿಯನ್ ಶಿಪ್’ನಲ್ಲಿ 2-0 ಅಂತರದಲ್ಲಿ ಜಯಿಸಿತ್ತು. ಭಾರತ ತಂಡವು 2020ರ ವರ್ಷಾರಂಭದ ವೇಳೆಗೆ ನ್ಯೂಜಿಲೆಂಡ್ ಪ್ರವಾಸ್ ಕೈಗೊಳ್ಳಲಿದ್ದು, ಆಗ ನೂತನ ವಿದೇಶಿ ಭತ್ಯೆ ಪಡೆಯಲಿದ್ದಾರೆ.