ಇಂಗ್ಲೆಂಡ್’ನ 100 ಬಾಲ್ ಲೀಗ್’ಗೆ ಕೊಹ್ಲಿ, ಧೋನಿ..?

Indian Cricket Stars Could Play In England New 100-Ball Tournament
Highlights

ಕ್ರಿಕೆಟ್ ಆಟವನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ 120 ಎಸೆತ (ಟಿ20) ಬದಲಿಗೆ ತಲಾ 100 ಎಸೆತಗಳ ಇನ್ನಿಂಗ್ಸ್‌ನ ಪಂದ್ಯವನ್ನು ನಡೆಸಲು ಇಸಿಬಿ ನಿರ್ಧರಿಸಿದೆ.

ಲಂಡನ್(ಮೇ.26): ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 2020ರಲ್ಲಿ ಆರಂಭಿಸಲಿರುವ 100 ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ತಾರಾ ಆಟಗಾರರಾದ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಸೇರಿ ಇನ್ನಿತರರು ಭಾಗವಹಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 
ಕ್ರಿಕೆಟ್ ಆಟವನ್ನು ಮತ್ತಷ್ಟು ರೋಚಕಗೊಳಿಸುವ ಸಲುವಾಗಿ 120 ಎಸೆತ (ಟಿ20) ಬದಲಿಗೆ ತಲಾ 100 ಎಸೆತಗಳ ಇನ್ನಿಂಗ್ಸ್‌ನ ಪಂದ್ಯವನ್ನು ನಡೆಸಲು ಇಸಿಬಿ ನಿರ್ಧರಿಸಿದೆ. ವಿದೇಶಿ ಲೀಗ್‌ಗಳಲ್ಲಿ ಭಾರತೀಯರನ್ನು ಆಡಲು ಬಿಡದ ಬಿಸಿಸಿಐ, ಮುಂದಿನ ದಿನಗಳಲ್ಲಿ ಲಂಡನ್‌ನಲ್ಲೂ ಐಪಿಎಲ್ ಮಾರುಕಟ್ಟೆ ವಿಸ್ತರಿಸುವ ಲೆಕ್ಕಾಚಾರದೊಂದಿಗೆ, ಈ ಲೀಗ್‌ಗೆ ತನ್ನ ಆಟಗಾರರನ್ನು ಕಳುಹಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 
ಈಗಾಗಲೇ ಟಿ20 ಕ್ರಿಕೆಟ್ ಜನಪ್ರಿಯಗೊಂಡಿದ್ದು, 100 ಬಾಲ್’ಗಳ ಕ್ರಿಕೆಟ್ ಕೂಡಾ ಅದೇ ರೀತಿ ಜನಪ್ರಿಯಗೊಳ್ಳುತ್ತಾ ಕಾದು ನೋಡಬೇಕಿದೆ.

loader