Asianet Suvarna News Asianet Suvarna News

ವಿಸ್ಡನ್ ಗೌರವಕ್ಕೆ ಪಾತ್ರರಾದ ವಿರಾಟ್ ಕೊಹ್ಲಿ

2014ರಲ್ಲಿ ನಿವೃತ್ತಿ ಘೋಷಿಸಿದ ಸಚಿನ್ ತೆಂಡೂಲ್ಕರ್ ಬಳಿಕ ಈ ಗೌರವಕ್ಕೆ ಭಾಜನವಾದ ಎರಡನೇ ಭಾರತೀಯ ಕೊಹ್ಲಿ.

Indian captain Virat Kohli shines on the cover of 2017 Wisden Cricketers Almanack

ನವದೆಹಲಿ(ಫೆ.04): ಸರಿಸುಮಾರು ಒಂದೂವರೆ ಶತಮಾನದಷ್ಟು ಹಳೆಯದಾದ, ಕ್ರಿಕೆಟ್ ಬೈಬಲ್ ಎಂದೇ ಕರೆಸಿಕೊಳ್ಳುವ ಪ್ರತಿಷ್ಠಿತ ವಿಸ್ಡನ್ ಕ್ರಿಕೆಟರ್ಸ್‌ ಅಲ್ಮನ್ಯಾಕ್‌'ನ ಈ ಸಾಲಿನ (2017) ಆವೃತ್ತಿಯ ಮುಖಪುಟದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿರಾಜಮಾನರಾಗಿದ್ದಾರೆ.

ಕಳೆದ ಸಾಲಿನಲ್ಲಿ 41 ಇನ್ನಿಂಗ್ಸ್‌ನಲ್ಲಿ 7 ಶತಕ, 13 ಅರ್ಧಶತಕ ಸೇರಿದಂತೆ 86.50ರ ಸರಾಸರಿಯಲ್ಲಿ 2,595 ರನ್ ಕಲೆಹಾಕಿರುವ 28ರ ಹರೆಯದ ಕೊಹ್ಲಿಯ ರಿವರ್ಸ್ ಸ್ವೀಪ್ ಮಾಡುತ್ತಿರುವ ಚಿತ್ರವನ್ನು ಮುಖಪುಟದಲ್ಲಿ ಬಳಸಲಾಗಿದೆ.

 

2014ರಲ್ಲಿ ನಿವೃತ್ತಿ ಘೋಷಿಸಿದ ಸಚಿನ್ ತೆಂಡೂಲ್ಕರ್ ಬಳಿಕ ಈ ಗೌರವಕ್ಕೆ ಭಾಜನವಾದ ಎರಡನೇ ಭಾರತೀಯ ಕೊಹ್ಲಿ.

1864ರಲ್ಲಿ ಇಂಗ್ಲಿಷ್ ಕ್ರಿಕೆಟಿಗ ಜಾನ್ ವಿಸ್ಡನ್ ಎಂಬಾತ ಇದನ್ನು ಸ್ಥಾಪಿಸಿದ್ದರು.

2017ನೇ ಸಾಲಿನ ವಿಸ್ಡನ್ ಆವೃತ್ತಿಯು ಏಪ್ರಿಲ್ 6ರಂದು ಪ್ರಕಟಗೊಳ್ಳಲಿದೆ.  

Follow Us:
Download App:
  • android
  • ios