ಪ್ರಶಸ್ತಿ ಸುತ್ತಿನಲ್ಲಿ ಭಾರತದವರೇ ಆದ ಆದಿತ್ಯ ಜೋಷಿ ವಿರುದ್ಧ ಕಣಕ್ಕಿಳಿದಿದ್ದ ಪ್ರತೂಲ್, 21-17, 12-12, 21-15 ಗೇಮ್‌ಗಳ ಅಂತರದಲ್ಲಿ ಜಯ ಸಾಧಿಸಿದರು.
ನವದೆಹಲಿ(ನ.02): ಬಹರೇನ್ನ ಸೆಗಾಯ್ಯಾದಲ್ಲಿ ಇತ್ತೀಚೆಗೆ ನಡೆದ ರೂ. 11 ಲಕ್ಷ ಬಹುಮಾನ ಮೊತ್ತದ ಬಹರೇನ್ ಅಂತಾರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತೀಯ ಯುವ ಆಟಗಾರ ಪ್ರತೂಲ್ ಜೋಷಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪ್ರಶಸ್ತಿ ಸುತ್ತಿನಲ್ಲಿ ಭಾರತದವರೇ ಆದ ಆದಿತ್ಯ ಜೋಷಿ ವಿರುದ್ಧ ಕಣಕ್ಕಿಳಿದಿದ್ದ ಪ್ರತೂಲ್, 21-17, 12-12, 21-15 ಗೇಮ್ಗಳ ಅಂತರದಲ್ಲಿ ಜಯ ಸಾಧಿಸಿದರು.
ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್ ಪಂದ್ಯಗಳಲ್ಲಿ ಪ್ರತೂಲ್, ಭಾರತದ ಮತ್ತೊಬ್ಬ ಆಟಗಾರ ಸಿದ್ಧಾರ್ಥ್ ಠಾಕೂರ್ ವಿರುದ್ಧ 21-16, 22-20 ಗೇಮ್ಗಳ ಅಂತರದಲ್ಲಿ, ಆದಿತ್ಯ ಜೋಷಿಯವರು ಆನಂದ್ ಪವಾರ್ ವಿರುದ್ಧ 21-19, 21-7 ಗೇಮ್ಗಳ ಅಂತರದಲ್ಲಿ ಜಯ ಸಾಧಿಸಿದ್ದರು.
