ಇಂಡೋನೇಷ್ಯಾ ಓಪನ್‌: ಎಚ್‌ ಎಸ್ ಪ್ರಣಯ್‌ ಕ್ವಾರ್ಟರ್‌ಗೆ ಲಗ್ಗೆ

ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಣಯ್ ಕ್ವಾರ್ಟರ್ ಫೈನಲ್ ಪ್ರವೇಶ
ಹಾಂಕಾಂಗ್ ಆಟಗಾರನ ಎದುರು ಪ್ರಾಬಲ್ಯ ಮೆರೆದ ಎಚ್‌.ಎಸ್‌.ಪ್ರಣಯ್‌
ಭಾರತದ ಮಹಿಳಾ ಹಾಗೂ ಪುರುಷರ ಡಬಲ್ಸ್‌ ಜೋಡಿಗೆ ನಿರಾಸೆ

Indian Ace Shuttler HS Prannoy storms into Indonesia Open quarterfinals kvn

ಜಕಾರ್ತ(ಜೂ.17): ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಎಚ್‌.ಎಸ್‌.ಪ್ರಣಯ್‌ (HS Prannoy) ಅವರು ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ಅವರು ಹಾಂಕಾಂಗ್‌ನ ಕ ಲಾಂಗ್‌ ಅನ್ಗುಸ್‌ ವಿರುದ್ಧ 21-11, 21-18 ಅಂತರದಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಅವರು ಡೆನ್ಮಾರ್ಕ್ನ ರಾಸ್ಮಸ್‌ ಗೆಮ್ಕೆ ಸವಾಲನ್ನು ಎದುರಿಸಲಿದ್ದಾರೆ. ಆದರೆ ಶಮೀರ್‌ ವರ್ಮಾ 2ನೇ ಸುತ್ತಲ್ಲಿ ಸೋಲನುಭವಿಸಿದರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ ಕಪಿಲಾ ಜೋಡಿ ಸೋತು ಹೊರಬಿತ್ತು.

ಈಗಾಗಲೇ ಭಾರತದ ತಾರಾ ಶಟ್ಲರ್‌ಗಳಾದ 20ರ ಲಕ್ಷ್ಯ ಸೆನ್‌ (Lakshya Sen) ಹಾಗೂ ಕಿದಂಬಿ ಶ್ರೀಕಾಂತ್‌ (Kidambi Srikanth) ಅವರ ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಅಭಿಯಾನ ಮೊದಲ ಸುತ್ತಲ್ಲೇ ಆಘಾತಕಾರಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಸೆನ್‌, ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ವಿರುದ್ಧ ನೇರ ಗೇಮ್‌ಗಳಿಂದ ಪರಾಭವಗೊಂಡರು. ವಿಶ್ವ ನಂ.11 ಶ್ರೀಕಾಂತ್‌, ಫ್ರಾನ್ಸ್‌ನ ಬ್ರೈಸ್‌ ಲೆವೆರ್ಡೆಜ್‌ ವಿರುದ್ಧ ಸೋತು ಹೊರಬಿದ್ದರು. ಈ ಮೂವರೂ ಥಾಮಸ್‌ ಕಪ್‌ ಗೆದ್ದ ಭಾರತ ತಂಡದಲ್ಲಿದ್ದರು

ವೇಟ್‌ಲಿಫ್ಟಿಂಗ್: ಚಿನ್ನ ಗೆದ್ದ ಮೀರಾಬಾಯಿ ಚಾನು

ಶಿಮ್ಲಾ: ಚೊಚ್ಚಲ ಆವೃತ್ತಿಯ ಖೇಲೋ ಇಂಡಿಯಾ ವೇಟ್‌ಲಿಫ್ಟಿಂಗ್ ಲೀಗ್‌ನಲ್ಲಿ ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆಯನ್ನು ಮುರಿಯುವಲ್ಲಿ ಮೀರಾಬಾಯಿ ಚಾನು ವಿಫಲವಾಗಿದ್ದಾರೆ. ಗುರುವಾರ ನಡೆದ ಕ್ರೀಡಾಕೂಟದಲ್ಲಿ ಅವರು ಮಹಿಳಾ ವಿಭಾಗದಲ್ಲಿ ಒಟ್ಟು 191 ಕೆ.ಜಿ. ಭಾರ ಎತ್ತಿ ಬಂಗಾರ ಪಡೆದರು. 

ಭಾರತದ ತಾರಾ ವೇಟ್‌ಲಿಫ್ಟಿಂಗ್ ಪಟು ಮೀರಾಬಾಯಿ ಚಾನು ಕಳೆದ ವರ್ಷ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಇದರ ಜತೆಗೆ ಭಾರತಕ್ಕೆ ಪದಕಗಳ ಖಾತೆ ತೆರೆದಿದ್ದರು.

ವಿಶ್ವ ಪೆಂಕಾಕ್‌ ಸಿಲತ್‌ ಗೇಮ್ಸ್‌: ಗಂಗಾವತಿಯ ಆಕಾಶ ಆಯ್ಕೆ

ರಾಮಮೂರ್ತಿ ನವಲಿ, ಕನ್ನಡಪ್ರಭ

ಗಂಗಾವತಿ: ಮಲೇಷ್ಯಾದ ಮಲಕಾ ನಗರದಲ್ಲಿ ಜು.26ರಿಂದ 31ರ ವರೆಗೆ ನಡೆಯಲಿರುವ 19ನೇ ವಿಶ್ವ ಪೆಂಕಾಕ್‌ ಸಿಲತ್‌(ಸಮರ ಕಲೆ) ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಗಂಗಾವತಿಯ ಆಕಾಶ ದೊಡ್ಡವಾಡ ಮತ್ತು ಕೊಡಗಿನ ದೇಚಮ್ಮ ಸುದ್ದಯ್ಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಕಾಶ 5 ವರ್ಷಗಳಿಂದ ಸಮರ ಕಲೆಯನ್ನು ಗಂಗಾವತಿಯ ‘ಪ್ರಗತಿ ಕ್ರೀಡಾ ಸಂಸ್ಥೆ’ಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಪೆಂಕಾಕ್‌ ಸಿಲತ್‌, ಸಿಲಂಬಮ್‌ ಹಾಗೂ ಜಂಪ್‌ ರೋಪ್‌ ಕ್ರೀಡೆಗಳನ್ನು ಆಕಾಶ ಕರಗತ ಮಾಡಿಕೊಂಡಿದ್ದು, ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಅಥ್ಲೀಟ್‌ಗಳ ಜೊತೆ ಮಹಿಳಾ ಕೋಚ್‌ ಕಡ್ಡಾಯ: SAI ಮಹತ್ವದ ತೀರ್ಮಾನ

ಪೆಂಕಾಕ್‌ ಸಿಲತ್‌ ಕ್ರೀಡೆಯು ಏಷ್ಯಾದ ಪುರಾತನ ಸಮರ ಕಲೆಯಾಗಿದ್ದು, ಇಂಡೋನೇಷ್ಯಾ ಸೇರಿದಂತೆ ಕೆಲ ದೇಶಗಳಲ್ಲಿ ನೆಚ್ಚಿನ ಕ್ರೀಡೆಯಾಗಿ ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ಆಕಾಶ ಅವರು ಇದರಲ್ಲಿ ತೊಡಗಿಸಿಕೊಂಡಿದ್ದು, 2018ರಲ್ಲಿ ಮೊದಲ ದಕ್ಷಿಣ ಭಾರತದ ರಾಜ್ಯಗಳ ಕ್ರೀಡಾಕೂಟದಲ್ಲಿ ಚಿನ್ನ, 2019ರಲ್ಲಿ ಪಂಜಾಬ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ 1 ಬೆಳ್ಳಿ, 1 ಕಂಚಿನ ಪದಕ ಪಡೆದಿದ್ದಾರೆ. ಜೊತೆಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹಲವು ಕ್ರೀಡಾಕೂಟಗಳಲ್ಲಿ ಹಲವು ಸಾಧನೆ ಮಾಡಿದ್ದಾರೆ.

Latest Videos
Follow Us:
Download App:
  • android
  • ios