54 ಎಸೆತಗಳಲ್ಲಿ 67 ರನ್ ಸಿಡಿಸಿದ ಪಾರ್ಥಿವ್ ಪಟೇಲ್ ತಂಡವನ್ನ ಗೆಲುವಿನ ದಡ ಸೇರಿಸಿದರು. ಆಂಗ್ಲರು ಯಾವುದೇ ಹಂತದಲ್ಲಿ ಮೇಲುಗೈ ಸಾಧಿಸಲು ಪಾರ್ಥಿವ್ ಅವಕಾಶ ಕೊಡಲಿಲ್ಲ.

ಮೊಹಾಲಿ(ನ.29): ಮೊಹಾಲಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿದೆ. 2ನೇ ಇನ್ನಿಂಗ್ಸ್`ನಲ್ಲಿ ಇಂಗ್ಲೆಂಡ್ ನೀಡಿದ 103 ರನ್`ಗಳ ಗುರಿಯನ್ನ ಕೇವಲ 2 ವಿಕೆಟ್ ಕಳೆದುಕೊಂಡು ನಿರಾಸವಾಗಿ ತಲುಪಿದ ಭಾರತ ಗೆಲುವಿನ ನಗೆ ಬೀರಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದೆ.

54 ಎಸೆತಗಳಲ್ಲಿ 67 ರನ್ ಸಿಡಿಸಿದ ಪಾರ್ಥಿವ್ ಪಟೇಲ್ ತಂಡವನ್ನ ಗೆಲುವಿನ ದಡ ಸೇರಿಸಿದರು. ಆಂಗ್ಲರು ಯಾವುದೇ ಹಂತದಲ್ಲಿ ಮೇಲುಗೈ ಸಾಧಿಸಲು ಪಾರ್ಥಿವ್ ಅವಕಾಶ ಕೊಡಲಿಲ್ಲ.

ಎರಡೂ ಇನ್ನಿಂಗ್ಸ್`ಗಳಿಂದ ಒಟ್ಟು 4 ವಿಕೆಟ್ ಉರುಳಿಸಿ 90 ರನ್ ಸಿಡಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 283 ಮತ್ತು 236

ಭಾರತ: 417 ಮತ್ತು 104/2

ಪಾರ್ಥಿವ್ ಪಟೇಲ್: ಅಜೇಯ 67

ಪೂಜಾರ: 25