ಕ್ರೀಸ್'ನಲ್ಲಿ ಚೇತೇಶ್ವರ್ ಪೂಜಾರ 47 ಹಾಗೂ ವೃದ್ಧಿಮಾನ್ ಸಹಾ 6 ರನ್ ಗಳಿಸಿ ಆಟವಾಡುತ್ತಿದ್ದರು.
ಕೋಲ್ಕತ್ತಾ(ನ.17): ಈಡನ್ ಗಾರ್ಡ್'ನ್'ನಲ್ಲಿ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್'ನ 2ನೇ ದಿನವೂ ಮಳೆಯೇ ಆಟವಾಡಿತು. ಬೆಳಿಗ್ಗೆ ಪಂದ್ಯ ಆರಂಭವಾದರೂ ನಡೆದಿದ್ದು ಮಾತ್ರ ಕೇವಲ 20 ಓವರ್'ಗಳ ಆಟ.
ನಿನ್ನೆ 11.5 ಓವರ್ ಆಟ ನಡೆದು 17/3 ವಿಕೇಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು 20 ಓವರ್'ಗಳಲ್ಲಿ ಮತ್ತೆರಡು ವಿಕೇಟ್ ಪತನವಾಯಿತು. ಅಜಿಂಕ್ಯಾ ರಹಾನೆ ಹಾಗೂ ಆರ್. ಅಶ್ವಿನ್ ತಲಾ 4 ರನ್ ಗಳಿಸಿ ಶಾನಕಾ ಬೌಲಿಂಗ್'ನಲ್ಲಿ ಔಟಾದರು. ಕ್ರೀಸ್'ನಲ್ಲಿ ಚೇತೇಶ್ವರ್ ಪೂಜಾರ 47 ಹಾಗೂ ವೃದ್ಧಿಮಾನ್ ಸಹಾ 6 ರನ್ ಗಳಿಸಿ ಆಟವಾಡುತ್ತಿದ್ದರು. ಮಳೆ ಹೆಚ್ಚಾದ ಕಾರಣ ಮಧ್ಯಾಹ್ನ 2.30ಕ್ಕೆ ದಿನದ ಆಟವನ್ನು ರದ್ದುಗೊಳಿಸಲಾಯಿತು.
ಸ್ಕೋರ್
ಭಾರತ 32.5 ಓವರ್'ಗಳಲ್ಲಿ 74/5
(ಪೂಜಾರ ಅಜೇಯ 47, ಸಹಾ ಅಜೇಯ 6, ಲಕ್ಮಲ್ 5/3, ಶಾನಕ 2/23)
