Asianet Suvarna News Asianet Suvarna News

ಚಾಂಪಿಯನ್ಸ್ ಟ್ರೋಪಿ'ಗೆ ತಂಡವನ್ನು ತಕ್ಷಣ ಆಯ್ಕೆ ಮಾಡಿ: ಬಿಸಿಸಿಐಗೆ ಚಾಟಿ

ಈಗಾಗಲೇ ಏಪ್ರಿಲ್ 25ಕ್ಕೆ ತಂಡದ ಸದಸ್ಯರನ್ನು ಆಯ್ಕೆ ಮಾಡಲು ಗಡುವು ನೀಡಲಾಗಿತ್ತು. ಆದರೆ ಇನ್ನು ಏಕೆ  ನೇಮಕ ಮಾಡಿಲ್ಲ '. ಶೀಘ್ರದಲ್ಲಿಯೇ ಆಯ್ಕೆ ಸಮಿತಿ ಸಭೆ ಕರೆದು ತಂಡ ರಚಿಸಬೇಕು  ಎಂದು ಬಿಸಿಸಿಐ'ನ ಅಮಿತಾಭ್ ಚೌದರಿ ಅವರಿಗೆ ಸಮಿತಿ ಆದೇಶಿಸಿದೆ.

India Will Play Champions Trophy Announce Squad Immediately
  • Facebook
  • Twitter
  • Whatsapp

ಮುಂಬೈ(ಮೇ.04): ಜೂನ್ 1ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಪಿ'ಗೆ ಭಾರತ ತಂಡವನ್ನು ತಕ್ಷಣ ಆಯ್ಕೆ ಮಾಡುವಂತೆ ಬಿಸಿಸಿಐ'ಗೆ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ ನಿರ್ದೇಶಿಸಿದೆ.

ಈಗಾಗಲೇ ಏಪ್ರಿಲ್ 25ಕ್ಕೆ ತಂಡದ ಸದಸ್ಯರನ್ನು ಆಯ್ಕೆ ಮಾಡಲು ಗಡುವು ನೀಡಲಾಗಿತ್ತು. ಆದರೆ ಇನ್ನು ಏಕೆ  ನೇಮಕ ಮಾಡಿಲ್ಲ '. ಶೀಘ್ರದಲ್ಲಿಯೇ ಆಯ್ಕೆ ಸಮಿತಿ ಸಭೆ ಕರೆದು ತಂಡ ರಚಿಸಬೇಕು  ಎಂದು ಬಿಸಿಸಿಐ'ನ ಅಮಿತಾಭ್ ಚೌದರಿ ಅವರಿಗೆ ಸಮಿತಿ ಆದೇಶಿಸಿದೆ. ಇತ್ತೀಚಿಗೆ ದುಬೈನಲ್ಲಿ ನಡೆದ ಸಭೆಯಲ್ಲಿ ಐಸಿಸಿಯೊಂದಿಗೆ ಯಾವ ರೀತಿ ಆದಾಯ ಪ್ರಕ್ರಿಯೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದನ್ನು ಸಹ ತಿಳಿಸಬೇಕು' ಎಂದು ಕೇಳಿದೆ.

ಬಿಸಿಸಿಐ ಸ್ವಪ್ರತಿಷ್ಟೆ ಬಿಡಬೇಕು ಅಲ್ಲದೆ ಭಾರತವು ವಿಶ್ವದಲ್ಲಿಯೇ ಅತ್ಯತ್ತಮ ಕ್ರಿಕೆಟ್ ತಂಡವೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಐಪಿಎಲ್ ನಂತರ ಇಂಗ್ಲೆಂಡ್'ನಲ್ಲಿ ಜೂನ್ 1ರಿಂದ 18ವರೆಗೂ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ'ಯಲ್ಲಿ  ಭಾರತ ಒಳಗೊಂಡು 8 ತಂಡಗಳು ಸೆಣಸಲಿವೆ.

Follow Us:
Download App:
  • android
  • ios