ರಾಜ್‌ಕೋಟ್(ಅ.05):ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನವೂ  ವೆಸ್ಟ್ಇಂಡೀಸ್ ಹಿನ್ನಡೆ ಅನುಭವಿಸಿದೆ. ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ವಿಂಡೀಸ್ ಇದೀಗ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ 5ನೇ ವಿಕೆಟ್ ಕಳೆದುಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 649 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ಇಂಡೀಸ್ 2 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ಕ್ರೈಗ್ ಬ್ರಾಥ್ವೈಟ್ 2 ರನ್ ಸಿಡಿಸಿ ಔಟಾದರು.

ಕೀರನ್ ಪೊವೆಲ್ 1, ಶೈ ಹೋಪ್ 10, ಶಿಮ್ರೋನ್ ಹೆಟ್ಮೆಯರ್ 10 ಹಾಗೂ ಸುನಿಲ್ ಅಂಬ್ರಿಸ್ 12 ರನ್ ಸಿಡಿಸಿ ನಿರ್ಗಮಸಿದರು. ಈ ಮೂಲಕ 49 ರನ್‌ಗಳಿಗೆ ವೆಸ್ಟ್ಇಂಡೀಸ್ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ.