ಫ್ಲೋರಿಡಾ(ಆ.05): ವೆಸ್ಟ್ ಇಂಡೀಸ್ ವಿರುದ್ಧದ ಆರಂಭಿಕ 2 ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪಂದ್ಯಕ್ಕಾಗಿ ಅಮೆರಿಕಾದಿಂದ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಿದೆ. ಈಗಾಗಲೇ ಸರಣಿ ಕೈವಶ ಮಾಡಿರುವ ಟೀಂ ಇಂಡಿಯಾ ಅಂತಿಮ ಪಂದ್ಯಕ್ಕೆ ಕೆಲ ಬದಲಾವಣೆ ಮಾಡೋ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಬೆಂಚ್ ಸ್ಟ್ರೆಂಥ್ ಪರೀಕ್ಷಿಸಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ.

ಇದನ್ನೂ ಓದಿ: ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಕೈವಶ ಮಾಡಿದ ಭಾರತ

ಕೆಎಲ್ ರಾಹುಲ್,  ಶ್ರೇಯಸ್ ಅಯ್ಯರ್, ರಾಹುಲ್ ಚಹಾರ್ ಹಾಗೂ ದೀಪಕ್ ಚಹಾರ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿದರೆ ಚಹಾರ್ ಬ್ರದರ್ಸ್‌ಗೆ ಸ್ಛಾನ ಸಿಗಲಿದೆ. ಇತ್ತ ಬ್ಯಾಟಿಂಗ್‌ನಲ್ಲಿ ಬದಲಾವಣೆ ಮಾಡಿದರೆ ಕೆಎಲ್ ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಸ್ಥಾನ ಪಡೆಯಲಿದ್ದಾರೆ. ಕೊಹ್ಲಿ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ. 

ಇದನ್ನೂ ಓದಿ: ಕಾಶ್ಮೀರದಲ್ಲಿ ಹೈಅಲರ್ಟ್; ಕಣಿವೆ ರಾಜ್ಯ ತೊರೆಯಲು ಇರ್ಫಾನ್‌ಗೆ ಸೂಚನೆ!

ಆರಂಭಿಕ 2 ಪಂದ್ಯ ಅಮೆರಿಕದ ಫ್ಲೋರಿಡಾದಲ್ಲಿ ಆಯೋಜಿಸಲಾಗಿತ್ತು. ಇದೀಗ ಪಂದ್ಯಗಳು ವೆಸ್ಟ್ ಇಂಡೀಸ್‌ಗೆ ಸ್ಥಳಾಂತರಗೊಂಡಿದೆ.  3ನೇ ಹಾಗೂ ಅಂತಿಮ ಟಿ20 ಪಂದ್ಯ ಗಯಾನದಲ್ಲಿ ಆಯೋಜಿಸಲಾಗಿದೆ. ಆಗಸ್ಟ್ 6 ರಂದು 3ನೇ ಚುಟುಕು ಸಮರ ನಡೆಯಲಿದೆ.