ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಕೈವಶ ಮಾಡಿದ ಭಾರತ

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿ ಭಾರತದ ಪಾಲಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸೋತು ತವರಿಗೆ ವಾಪಾಸಾಗಿದ್ದ ಟೀಂ ಇಂಡಿಯಾ, ಇದೀಗ ವಿಂಡೀಸ್ ಪ್ರವಾಸದಲ್ಲಿ ಸರಣಿ ಗೆಲ್ಲೋ ಮೂಲಕ ಟೀಕೆಗಳಿಗೆ ಉತ್ತರ ನೀಡಿದೆ.

India defeat west indies by 22 runs in 2nd t20 and lift the series

ಲೌಡರ್‌ಹಿಲ್(ಆ.04): ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ 22 ರನ್ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಮಳೆಯಿಂದಾಗಿ ಪಂದ್ಯ  ಸ್ಥಗಿತಕೊಂಡಿತು. ಹೀಗಾಗಿ ಡಕ್ವರ್ತ್ ನಿಯಮ ಅನ್ವಯಿಸಿ ಭಾರತಕ್ಕೆ ಗೆಲುವು ಘೋಷಿಸಲಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗ 5 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿತ್ತು. 168 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಬಡ್ತಿ ಪಡೆದ ಸುನಿಲ್ ನರೈನ್ ಕೇವಲ 4 ರನ್ ಸಿಡಿಸಿ ಔಟಾದರೆ, ಇವಿನ್ ಲಿವಿಸ್ ಶೂನ್ಯ ಸುತ್ತಿದರು. 8 ರನ್ ಗಳಿಸುವಷ್ಟರಲ್ಲೇ ವಿಂಡೀಸ್ 2 ವಿಕೆಟ್ ಕಳೆದುಕೊಂಡಿತು.

"

ನಿಕೋಲನ್ ಪೂರನ್ ಹಾಗೂ ರೊವ್ಮಾನ್ ಪೊವೆಲ್ ಜೊತೆಯಾಟದಿಂದ  ಟೀಂ ಇಂಡಿಯಾ ಚೇತರಿಸಿಕೊಂಡಿತು. ಈ ಜೋಡಿ 74 ರನ್ ಜೊತೆಯಾಟ ನೀಡಿತು. ಪೂರನ್ 19 ರನ್ ಸಿಡಿಸಿ ಔಟಾದರು. ಪೊವೆಲ್ 54 ರನ್ ಕಾಣಿಕೆ ನೀಡಿದರು. ಪೊವೆಲ್ ವಿಕೆಟ್ ಪತನದೊಂದಿಗೆ ವಿಂಡೀಸ್ ಆತಂಕ ಹೆಚ್ಚಾಯಿತು.

15.3 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಕಳೆದುಕೊಂಡು 94 ರನ್ ಗಳಿಸಿತ್ತು.  ಗೆಲುವಿಗೆ ಇನ್ನೂ27 ಎಸೆತದಲ್ಲಿ 70 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ ಬ್ಯಾಡ್ ವೆದರ್ ಕಾರಣ ಪಂದ್ಯ ಸ್ಥಗಿತಗೊಂಡಿತು. ಮಿಂಚು ಸಿಡಿಲಿನ ಬಳಿಕ ಮಳೆ ಪಂದ್ಯಕ್ಕೆ ಅಡ್ಡಿಯಾಯಿತು. ಹೀಗಾಗಿ ಡಕ್ವರ್ತ್ ನಿಯಮ ಅನ್ವಯಿಸಿ ಭಾರತಕ್ಕೆ 22 ರನ್ ಗೆಲುವು ನೀಡಲಾಯಿತು. ಸದ್ಯ 3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಇಷ್ಟೇ ಅಲ್ಲ ಸರಣಿ ಗೆದ್ದುಕೊಂಡಿದೆ. 
 

Latest Videos
Follow Us:
Download App:
  • android
  • ios