ಹೈದರಾಬಾದ್ ಟೆಸ್ಟ್: ವಿಂಡೀಸ್ ತಂಡದ 3ನೇ ವಿಕೆಟ್ ಪತನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Oct 2018, 11:57 AM IST
India vs West Indies test cricket visitors 3 down at lunch
Highlights

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಆರಂಭಗೊಂಡಿದೆ. ಮೊದಲ ದಿನದಲ್ಲೇ ವೆಸ್ಟ್ಇಂಡೀಸ್ ದಿಟ್ಟ ಹೋರಾಟ ನೀಡೋ ಸೂಚನೆ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

ಹೈದರಾಬಾದ್ (ಅ.12): ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ವೆಸ್ಟ್ಇಂಡೀಸ್ ಇದೀಗ 2ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದೆ. ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಸ್ಪರ್ಧಾತ್ಮಕ ಮೊತ್ತದ ಸೂಚನೆ ನೀಡಿದೆ.

 

 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ವೆಸ್ಟ್ಇಂಡೀಸ್ ಉತ್ತಮ ಆರಂಭ ಪಡೆಯಲಿಲ್ಲ. 32 ರನ್ ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಪತನಗೊಂಡಿತು. ಕೀರನ್ ಪೊವೆಲ್ 22 ರನ್ ಸಿಡಿಸಿ ಔಟಾದರು. 

ಕ್ರೈಗ್ ಬ್ರಾಥ್ವೈಟ್ ಹಾಗೂ ಶೈ ಹೋಪ್ ಜೊತೆಯಾಟದಿಂದ ವಿಂಡೀಸ್ ಚೇತರಿಸಿಕೊಂಡಿತು. ಆದರೆ ಬ್ರಾಥ್ವೈಟ್ 14 ರನ್ ಸಿಡಿಸಿ ಔಟಾದರು. ದಿಟ್ಟ ಹೋರಾಟ ನೀಡಿದ  ಶೈ ಹೋಪ್ 36 ರನ್ ಸಿಡಿಸಿ ಔಟಾದರು. 

ಭೋಜನ ವಿರಾಮದ ವೇಳೆ ವೆಸ್ಟ್ಇಂಡೀಸ್ 3 ವಿಕೆಟ್ ನಷ್ಟಕ್ಕೆ 86 ರನ್ ಸಿಡಿಸಿದೆ. ಭಾರತದ ಪರ ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್ ಹಾಗೂ ಉಮೇಶ್ ಯಾದವ್ ತಲಾ ಒಂದು ವಿಕೆಟ್ ಪಡೆದರು. 

loader