ಹೈದರಾಬಾದ್ ಟೆಸ್ಟ್ ಪಂದ್ಯವನ್ನ ಟೀಂ ಇಂಡಿಯಾ ಮೂರೇ ದಿನಕ್ಕೆ ಮುಗಿಸಲು ಇನ್ನೊಂದು ಕಾರಣವಿದೆ. ಹೈದರಾಬಾದ್ ಬಿಸಿಲ ಬೇಗೆಯನ್ನ ತಪ್ಪಿಸಿಕೊಳ್ಳಲು ಭಾರತ ವೇಗವಾಗಿ ಟೆಸ್ಟ್ ಮುಗಿಸಿ ವಿಶ್ರಾಂತಿ ಪಡೆದಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕ್ರಿಕೆಟಿಗರು ಏನು ಮಾಡಿದರು? ಇಲ್ಲಿದೆ.
ಹೈದರಾಬಾದ್(ಅ.15): ದಕ್ಷಿಣ ಭಾರತದಲ್ಲೀಗ ಬಿಸಿಲ ಉರಿ ಹೆಚ್ಚಾಗಿದೆ. ಅದರಲ್ಲೂ ಹೈದರಾಬಾದ್‌ನಲ್ಲಿ 33 ಡಿಗ್ರಿ ಸೆಲ್ಶಿಯಸ್ ಇದ್ರೆ ಹ್ಯುಮಿಡಿಟಿ 51%. ಇದೇ ಬಿಸಿಸಿನಲ್ಲಿ ಟೀಂ ಇಂಡಿಯಾ, ವೆಸ್ಟ್ಇಂಡೀಸ್ ವಿರುದ್ಧ 3ನೇ ಟೆಸ್ಟ್ ಪಂದ್ಯ ಆಡಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬಿಸಿಲು ತಡೆಯಲಾಗದೇ ಬ್ಯಾಟ್ಸ್‌ಮನ್‌ಗಳು ಹಾಗೂ ವಿಂಡೀಸ್ ಫೀಲ್ಡರ್‌ಗಳು ಬಳಲಿದರು. ಇನ್ನು ಡ್ರೆಸ್ಸಿಂಗ್ ರೂಂನಲ್ಲಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಐಸ್ ಡ್ರಮ್‌ನಲ್ಲಿ ಕೂತು ಬಿಸಿಲ ಉರಿಯಿಂದ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಿದರು.
ವೆಸ್ಟ್ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನ ಟೀಂ ಇಂಡಿಯಾ ಮೂರೇ ದಿನಕ್ಕೆ ಮುಕ್ತಾಯಗೊಳಿಸಿತ್ತು. 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಆದರೆ ಬಿಸಿಲ ಉರಿ ಮಾತ್ರ ಉಭಯ ತಂಡದ ಆಟಗಾರರನ್ನ ಹೈರಾಣಾಗಿಸಿತ್ತು.
