ಫ್ಲೋರಿಡಾ(ಆ.03): ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಅಮೆರಿಕದ ಲೌಡರ್‌ಹಿಲ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಮೂಲಕ ಸರಣಿ ಆರಂಭಗೊಳ್ಳಲಿದೆ. ವಿಶ್ವಕಪ್ ಸೋಲಿನ ಬಳಿಕ ಇದೀಗ ಗೆಲುವಿಗಾಗಿ ಹಾತೊರೆಯುತ್ತಿರುವ ಟೀಂ ಇಂಡಿಯಾ ಶುಭಾರಂಭ ಮಾಡೋ ವಿಶ್ವಾಸದಲ್ಲಿದೆ. ಇಂದಿನ(ಆ.03) ಪಂದ್ಯಕ್ಕೆ ತಂಡದ ಆಯ್ಕೆಗೆ ಟೀಂ ಇಂಡಿಯಾ ಹೆಚ್ಚು ತಲೆ ಕೆಡಿಸಿಕೊಂಡಿದೆ.

ಇದನ್ನೂ ಓದಿ: ಇಂದು ಭಾರತ-ವಿಂಡೀಸ್‌ ಮೊದಲ ಟಿ20

ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವಿನ ಒಳಜಗಳ ಬದಿಗಿಟ್ಟು ಇಂದು ಹೋರಾಟ ನಡೆಸಬೇಕಿದೆ. ಮೊದಲ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ  ಸಂಭವನೀಯ ತಂಡ ಇಲ್ಲಿದೆ.

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ಮನೀಶ್ ಪಾಂಡೆ, ರಿಷಬ್ ಪಂತ್. ಕ್ರುನಾಲ್ ಪಾಂಡ್ಯ, ರಾಹುಲ್ ಚಹಾರ್, ಖಲೀಲ್ ಅಹಮ್ಮದ್, ದೀಪಕ್ ಚಹಾರ್, ನವದೀಪ್ ಸೈನಿ

ಪಂದ್ಯ ಹಾಗೂ ಸಮಯ

ಭಾರತ-ವೆಸ್ಟ್ ಇಂಡೀಸ್ - ಮೊದಲ ಟಿ20

ಸ್ಥಳ: ಫ್ಲೋರಿಡಾ(ಅಮೆರಿಕಾ)

ಸಮಯ; ರಾತಿ 8 ಗಂಟೆ