ಫ್ಲೋರಿಡಾ(ಜು.31): ಭಾರತ ಕ್ರಿಕೆಟ್‌ ತಂಡ ಒಂದು ತಿಂಗಳ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ ಪ್ರವಾಸಕ್ಕೆ ಸೋಮವಾರ ತಡರಾತ್ರಿ ಪ್ರಯಾಣ ಬೆಳೆಸಿತು. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಸಹ ಆಟಗಾರರೊಂದಿಗೆ ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಟ್ವೀಟ್‌ ಮಾಡಿದ್ದಾರೆ. 

 

ಇದನ್ನೂ ಓದಿ: ಟೀಂ ಇಂಡಿಯಾ ನೂತನ ಕೋಚ್; ಯಾರ ಕಡೆ ಕೊಹ್ಲಿ ಒಲವು ?

ಭಾರತ ತಂಡ ಮೊದಲು ಅಮೆರಿಕದ ಫ್ಲೋರಿಡಾದಲ್ಲಿ 2 ಟಿ20 ಪಂದ್ಯಗಳನ್ನು ಆಡಲಿದೆ. ಆ.3ರಿಂದ ಟಿ20 ಸರಣಿ ಆರಂಭಗೊಳ್ಳಲಿದ್ದು, ಆ.8ಕ್ಕೆ ಏಕದಿನ ಸರಣಿ ಶುರುವಾಗಲಿದೆ. ಆ.22ರಿಂದ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರಿರುವ 2 ಪಂದ್ಯಗಳ ಸರಣಿಯಲ್ಲಿ ಭಾರತ-ವಿಂಡೀಸ್‌ ಮುಖಾಮುಖಿಯಾಗಲಿವೆ.

ಭಾರತದ ವಿಂಡೀಸ್‌ ಪ್ರವಾಸ

(ವೇಳಾಪಟ್ಟಿ)

ಆ.3 - ಮೊದಲ ಟಿ20= ಲಾಡರ್‌ಹಿಲ್‌

ಆ.4 -  2ನೇ ಟಿ20 = ಲಾಡರ್‌ಹಿಲ್‌

ಆ.6  - 3ನೇ ಟಿ20  = ಗಯಾನ

ಆ.8   - ಮೊದಲ ಏಕದಿನ  =  ಗಯಾನ

ಆ.11  -  2ನೇ ಏಕದಿನ  =  ಟ್ರಿನಿಡಾಡ್‌

ಆ.14  -  3ನೇ ಏಕದಿನ  =  ಟ್ರಿನಿಡಾಡ್‌

ಆ.22-26  -  ಮೊದಲ ಟೆಸ್ಟ್‌ =   ಆ್ಯಂಟಿಗಾ

ಆ.30-ಸೆ.3 -   2ನೇ ಟೆಸ್ಟ್‌   = ಜಮೈಕಾ