ಟ್ರಿನಿಡಾಡ್(ಆ.11): ಭಾರತ ಹಾಗೂ ವೆಸ್ಟ್ ನಡುವಿನ 2ನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿತು. ಆದರೆ ಈ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿದೆ. 42.2 ಓವರ್‌ಗಳಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 233 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆ, ಪಂದ್ಯ ಮುನ್ನಡೆಸಲು ಅನುವು ಮಾಡಿಕೊಡಲಿಲ್ಲ.

ಇದನ್ನೂ ಓದಿ: INDvWI 2ನೇ ಏಕದಿನ: ಸೆಂಚುರಿ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದ ಕೊಹ್ಲಿ!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ. ಶಿಖರ್ ಧವನ್ 2 ರನ್ ಸಿಡಿಸಿ ಔಟಾದರೆ, ರೋಹಿತ್ ಶರ್ಮಾ 18 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆದರೆ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿದರು. ರಿಷಬ್ ಪಂತ್ ಆಟ 20 ರನ್‌ಗೆ ಅಂತ್ಯವಾಯಿತು. ಆದರೆ ಕೊಹ್ಲಿಗೆ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು. 

ಇದನ್ನೂ ಓದಿ: ಪಾಕಿಸ್ತಾನ ದಿಗ್ಗಜ ಕ್ರಿಕೆಟಿಗನ ದಾಖಲೆ ಮುರಿದ ವಿರಾಟ್ ಕೊಹ್ಲಿ!

ವಿಂಡೀಸ್ ದಾಳಿಗೆ ತಿರುಗೇಟು ನೀಡಿದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 42ನೇ  ಶತಕ ಸಿಡಿಸಿ ಮಿಂಚಿದರು. ಇತ್ತ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ಬಾರಿಸಿದರು. ಕೊಹ್ಲಿ 120 ರನ್ ಸಿಡಿಸಿ ಔಟಾದರು. ಇದೇ ವೇಳೆ ಸುರಿದ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಿತು.  . 42.2 ಓವರ್‌ಗಳಲ್ಲಿ  ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 233 ರನ್ ಸಿಡಿಸಿದೆ.