Asianet Suvarna News Asianet Suvarna News

ಅಶ್ವಿನ್, ಜಡೇಜಾ, ಶರ್ಮಾ ದಾಳಿಗೆ ಕುಸಿದ ಲಂಕಾ: ಭಾರತಕ್ಕೆ ಆರಂಭದಲ್ಲೇ ಆಘಾತ

ಕರುಣಾರತ್ನೆ(51) ಹಾಗೂ ಚಾಂಡಿಮಾಲ್(57) ಅವರ ಕೆಲ ಹೊತ್ತಿನ ಜೊತೆಯಾಟ ಶ್ರೀಲಂಕಾ 205 ರನ್'ಗಳನ್ನು ಗಳಿಸಲು ಸಾಧ್ಯವಾಯಿತು. ಡಿಕ್'ವೆಲ್ಲಾ(24) ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು 20ರ ಗಡಿ ದಾಟಲಿಲ್ಲ.

India vs Sri Lanka R Ashwin Ishant Sharma run through SL on Day 1

ನಾಗ್ಪುರ(ನ.24): ಸ್ಪಿನ್ನರ್'ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ವೇಗಿ ಇಶಾಂತ್ ಶರ್ಮಾ ಅವರ ದಾಳಿಗೆ ತಡಬಡಾಯಿಸಿದ ಲಂಕಾ ಆಟಗಾರರು ಮೊದಲ ಇನ್ನಿಂಗ್ಸ್'ನಲ್ಲಿ ಹೆಚ್ಚು ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ನಾಯಕ ಚಂಡಿಮಾಲ್ ಹಾಗೂ ಆರಂಭಿಕ ಆಟಗಾರ ಕರುಣಾರತ್ನೆ ಅವರ ಅರ್ಧ ಶತಕದ ನೆರವಿನಿಂದ  205(79.1) ರನ್ ಮಾತ್ರ ಕಲೆ ಹಾಕಿದ್ದಾರೆ.

ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ 5 ಓವರ್'ಗಳಾಗುವಷ್ಟರಲ್ಲೇ ಸಮರವಿಕ್ರಮ ಅವರ ವಿಕೇಟ್ ಕಳೆದುಕೊಂಡಿತು.  ವೇಗಿ  ಶರ್ಮಾ ಬೌಲಿಂಗ್'ನಲ್ಲಿ  ಸಮರ ವಿಕ್ರಮಾ ಪೂಜಾರ ಅವರಿಗೆ ಕ್ಯಾಚಿತ್ತು ಔಟಾದರು.

ಸ್ಪಿನ್ನರ್'ಗಳ ದಾಳಿಗೆ ಪಟಪಟನೆ ಉದುರಿದ ಸಿಂಹಳಿಯರು

ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ಲಂಕನ್ನರ ವಿಕೇಟ್'ಗಳನ್ನು ಉರುಳಿಸುವ ಮೂಲಕ ಮತ್ತೆ ಫಾರ್ಮ್'ಗೆ ಮರಳಿದರು. ತಿರಮನ್ನೆ,ಚಂಡಿಮಾಲ್, ಹೆರಾತ್ ಹಾಗೂ ಶನಕಾ ಅವರನ್ನು ಅಶ್ವಿನ್ ಪೆವಿಲಿಯನ್'ಗೆ ಕಳಿಸಿದರೆ, ಮ್ಯಾಥ್ಯೋಸ್,ಪೆರೇರಾ, ಡಿಕ್'ವೆಲ್ಲಾ'ರನ್ನು ಜಡೇಜಾ ಔಟ್ ಮಾಡಿದರು. ಇವರಿಬ್ಬರ ಜೊತೆ ಇಶಾಂತ್ ಶರ್ಮಾ ಕೂಡ ಮೂರು ವಿಕೇಟ್'ಗಳನ್ನು ಪಡೆದು ತಾನೇನು ಕಡಿಮೆಯಿಲ್ಲ ಎಂದು ತೋರಿಸಿದರು.

ಕರುಣಾರತ್ನೆ(51) ಹಾಗೂ ಚಾಂಡಿಮಾಲ್(57) ಅವರ ಕೆಲ ಹೊತ್ತಿನ ಜೊತೆಯಾಟ ಶ್ರೀಲಂಕಾ 205 ರನ್'ಗಳನ್ನು ಗಳಿಸಲು ಸಾಧ್ಯವಾಯಿತು. ಡಿಕ್'ವೆಲ್ಲಾ(24) ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರ್ಯಾರು 20ರ ಗಡಿ ದಾಟಲಿಲ್ಲ.

ಭಾರತಕ್ಕೆ ಆರಂಭಿಕ ಆಘಾತ

8 ಓವರ್'ಗಳು ಇರುವಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲಿಯೇ ಕನ್ನಡಿಗ ಕೆ.ಎಲ್. ರಾಹುಲ್ (7) ಗಮಗೆ ಬೌಲಿಂಗ್'ನಲ್ಲಿ ಬೌಲ್ಡ್ ಆದರು. ಎಂ. ವಿಜಯ್(2)ಹಾಗೂ ಪೂಜಾರಾ(2) ರನ್ ಗಳಿಸಿ ಆಡುತ್ತಿದ್ದಾರೆ. ಮೊದಲ ದಿನ ಕೊನೆಗೊಂಡಾಗ ಭಾರತ 8 ಓವರ್'ಗಳಲ್ಲಿ 11/1 ರನ್ ಗಳಿಸಿತ್ತು.

ಸ್ಕೋರ್

ಶ್ರೀಲಂಕಾ 79.1 ಓವರ್'ಗಳಲ್ಲಿ 205/10

(ಕರುಣಾರತ್ನೆ 51, ಚಾಂಡಿಮಲ್ 57, ಅಶ್ವಿನ್ 67/4, ಇಶಾಂತ್ ಶರ್ಮಾ 37/3, ಜಡೇಜಾ 56/3)

ಭಾರತ 8 ಓವರ್'ಗಳಲ್ಲಿ 11/1           

Follow Us:
Download App:
  • android
  • ios