50ನೇ ಟೆಸ್ಟ್ ಆಡಿದ ಚೇತೇಶ್ವರ್ ಪೂಜಾರ ತಮ್ಮ ಟೆಸ್ಟ್‌ ಜೀವನದಲ್ಲಿ 13ನೇ ಶತಕ ಪೂರೈಸುವುದರೊಂದಿಗೆ 4000 ರನ್ ಕಲೆಹಾಕಿದರು.

ಕೊಲಂಬೊ(ಆ.03): ಪೂಜಾರಾ ಹಾಗೂ ರಹಾನೆ ಅವರ ಅಜೇಯ ಶತಕಗಳ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್'ನಲ್ಲಿ ಬೃಹತ್ ಮೊತ್ತದತ್ತ ದಾಫುಗಾಲುತ್ತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆ ಮೊದಲ ದಿನದಾಟದಂತ್ಯಕ್ಕೆ ತಂಡ ಕೇವಲ 3 ವಿಕೆಟ್ ಕಳೆದುಕೊಂಡು 344 ರನ್ ಗಳಿಸಿದೆ. 211 ರನ್'ಗಳ ಜೊತೆಯಾಟದಿಂದ ಸೌರಾಷ್ಟ್ರದ ಬ್ಯಾಟ್ಸ್'ಮೆನ್ ಚೇತೇಶ್ವರ ಪೂಜಾರ (128) ಹಾಗೂ ಮುಂಬೈ ಆಟಗಾರ ಅಜಿಂಕ್ಯ ರಹಾನೆ (103) ಆಜೇಯರಾಗುಳಿದರು.

ಅನಾರೋಗ್ಯದಿಂದ ಚೇತರಿಸಿಕೊಂಡ ಕನ್ನಡಿಗ ಕೆ.ಎಲ್.ರಾಹುಲ್ 82 ಎಸತಗಳಲ್ಲಿ 7 ಬೌಂಡರಿಯೊಂದಿಗೆ 57 ರನ್ ಗಳಿಸಿದರು. ಮೊದಲ ಟೆಸ್ಟ್'ನಲ್ಲಿ ಭರ್ಜರಿ ಆಟವಾಡಿದ್ದ ಶಿಖರ್ ಧವನ್ ಇಂದು ಕೂಡ (35:37 ಎಸತಗಳಲ್ಲಿ 5 ಬೌಂಡರಿ, 1 ಭರ್ಜರಿ ಸಿಕ್ಸ್'ರ್') ಉತ್ತಮವಾಗಿ ಆಟ ಆರಂಭಿಸಿದರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಪೂಜಾರ 40000 ರನ್, ರಹಾನೆ ಹಾಗೂ ರಾಹುಲ್ ಕೂಡ ದಾಖಲೆ

50ನೇ ಟೆಸ್ಟ್ ಆಡಿದ ಚೇತೇಶ್ವರ್ ಪೂಜಾರ ತಮ್ಮ ಟೆಸ್ಟ್‌ ಜೀವನದಲ್ಲಿ 13ನೇ ಶತಕ ಪೂರೈಸುವುದರೊಂದಿಗೆ 4000 ರನ್ ಕಲೆಹಾಕಿದರು. ಅಲ್ಲದೇ ಶ್ರೀಲಂಕಾ ವಿರುದ್ಧ ಸತತ ಮೂರು ಟೆಸ್ಟ್‌ಗಳ ಪ್ರಥಮ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಕೀರ್ತಿಗೂ ಪಾತ್ರರಾದರು.

ಟೆಸ್ಟ್‌ನಲ್ಲಿ 9ನೇ ಶತಕ ಪೂರೈಸಿದ ಅಜಿಂಕ್ಯ ರಹಾನೆ ವಿದೇಶದಲ್ಲಿ 6ನೇ ಶತಕ ಬಾರಿಸಿದ ಬ್ಯಾಟ್ಸ್'ಮೆನ್'ಗಳಲ್ಲಿ ಒಬ್ಬರಾಗಿದ್ದಾರೆ. ಕೆ.ಎಲ್.ರಾಹುಲ್ ಆಕರ್ಷಕ 57 ರನ್ ಗಳಿಸುವ ಮೂಲಕ ಸತತ ಆರು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಭಾರತದ 3ನೇ ಆಟಗಾರ ಎನ್ನುವ ದಾಖಲೆ ಬರೆದರು. ಈ ಮೊದಲು ಜಿ.ಆರ್.ವಿಶ್ವನಾಥ್ ಹಾಗೂ ರಾಹುಲ್ ದ್ರಾವಿಡ್ ಈ ಸಾಧನೆ ಮಾಡಿದ್ದರು. ವಿಶೇಷ ಎಂದರೆ ಮೂವರೂ ಕರ್ನಾಟಕದವರು. ಸತತವಾಗಿ ಅತಿಹೆಚ್ಚು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ, ಆಸ್ಟ್ರೇಲಿಯಾದ ಕ್ರಿಸ್ ರೋಜರ್ಸ್‌(07) ಹೆಸರಿನಲ್ಲಿದೆ.