INDvSA 1ನೇ ಟೆಸ್ಟ್; ಮೊದಲ ದಿನದಾಟ ರದ್ದು, ಭಾರತಕ್ಕೆ ನಿರಾಸೆ!
ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತದ ಬ್ಯಾಟಿಂಗ್ ಜೊತೆಗೆ ಮಳೆರಾಯನ ಆರ್ಭಟವೂ ಹೆಚ್ಚಾಯಿತು. ಸತತ ಮಳೆಯಿಂದ ಮೊದಲ ದಿನದಾಟ ರದ್ದಾಗಿದೆ.
ವಿಶಾಖಪಟ್ಟಣಂ(ಅ.02): ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಅಬ್ಬರಿಸಿದ ಟೀಂ ಇಂಡಿಯಾಗೆ ಮಳೆರಾಯ ಅಡ್ಡಿಯಾಗಿದ್ದಾನೆ. ರೋಹಿತ್ ಶರ್ಮಾ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ಬೃಹತ್ ಮೊತ್ತದತ್ತ ಮುನ್ನಗ್ಗುತ್ತಿದ್ದ ಭಾರತಕ್ಕೆ ಕೊಂಚ ನಿರಾಸೆಯಾಗಿದೆ. ಮಳೆಯಿಂದಾಗಿ ಮೊದಲ ದಿನದಾಟ ರದ್ದಾಗಿದೆ.
ಇದನ್ನೂ ಓದಿ: ವೈಜಾಗ್ ಟೆಸ್ಟ್: ಆರಂಭಿಕನಾಗಿ ರೋಹಿತ್ ಶರ್ಮಾ ದಾಖಲೆಯ ಶತಕ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಭರ್ಜರಿ ಆರಂಭ ಪಡೆಯಿತು. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಆಕರ್ಷಕ ಸೆಂಚುರಿ ಸಿಡಿಸಿದರು. ಇತ್ತ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಫ್ ಸೆಂಚುರಿ ಸಿಡಿಸಿದರು. ಭಾರತ ವಿಕೆಟ್ ನಷ್ಟವಿಲ್ಲದೆ 202 ರನ್ ಸಿಡಿಸಿತು. ರೋಹಿತ್ ಅಜೇಯ 115 ರನ್ ಹಾಗೂ ಮಯಾಂಕ್ ಅಜೇಯ 84 ರನ್ ಸಿಡಿಸಿದರು. ಈ ವೇಳೆ ಸುರಿದ ಮಳೆಯಿಂದ ಪಂದ್ಯ ತಾತ್ಕಾಲಿಕ ಸ್ಥಗಿತಗೊಂಡಿತು.
ಇದನ್ನೂ ಓದಿ: ರೋಹಿತ್ ಶರ್ಮಾ ಟೆಸ್ಟ್ ಸೆಂಚುರಿ; ಟ್ವಿಟರಿಗರಿಂದ ಶಹಬ್ಬಾಷ್!
ಸತತವಾಗಿ ಸುರಿದ ಮಳೆಯಿಂದ ಮೈದಾನ ಸಂಪೂರ್ಣ ಒದ್ದೆಯಾಯಿತು. ಇಷ್ಟೇ ಅಲ್ಲ ಮಂದ ಬೆಳಕಿನ ಕಾರಣ ಮೊದಲ ದಿನದಾಟ ರದ್ದು ಮಾಡಲಾಯಿತು.. ಮೊದಲ ದಿನದಾಟದಲ್ಲಿ ಕನಿಷ್ಠ 30 ಓವರ್ ಆಟ ಬಾಕಿ ಇತ್ತು. ಮೊದಲ ದಿನವೇ ಬೃಹತ್ ಮೊತ್ತ ಪೇರಿಸುವ ಭಾರತದ ಕನಸಿಗೆ ಮಳೆ ಅಡ್ಡಿಯಾಯಿತು.
ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: