ವಿಶಾಖಪಟ್ಟಣಂ[ಅ.05]: ಮತ್ತುಸ್ವಾಮಿ[33] ಅಲ್ಪ ಪ್ರತಿರೋಧದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ 431 ರನ್’ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಭಾರತ ಮೊದಲ ಇನಿಂಗ್ಸ್ ನಲ್ಲಿ 71 ರನ್’ಗಳ ಮುನ್ನಡೆ ಸಾಧಿಸಿದೆ. ಅಶ್ವಿನ್ 7 ವಿಕೆಟ್ ಕಬಳಿಸಿ ಮಿಂಚಿದರು.

ವೈಜಾಗ್ ಟೆಸ್ಟ್: ಮಿಂಚಿದ ಅಶ್ವಿನ್, ಆಲೌಟ್ ಹೊಸ್ತಿಲಲ್ಲಿ ಆಫ್ರಿಕಾ

ಮೂರನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 385 ರನ್ ಬಾರಿಸಿದ್ದ ಆಫ್ರಿಕಾ ನಾಲ್ಕನೇ ದಿನದಾಟದ ಆರಂಭದಲ್ಲೇ ಕೇಶವ್ ಮಹರಾಜ್ ವಿಕೆಟ್ ಕಳೆದುಕೊಂಡಿತು. ಇಂದು ತನ್ನ ಖಾತೆಗೆ 6 ರನ್ ಸೇರಿಸಿದ ಕೇಶವ್ ಮಹರಾಜ್, ಅಶ್ವಿನ್ ಬೌಲಿಂಗ್’ನಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಮಯಾಂಕ್ ಅಗರ್ ವಾಲ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು 10ನೇ ವಿಕೆಟ್’ಗೆ ಜತೆಯಾದ ಮುತ್ತುಸ್ವಾಮಿ-ರಬಾಡ ಜೋಡಿ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು. ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಸೆನುರನ್ ಮುತ್ತುಸ್ವಾಮಿ 106 ಎಸೆತಗಳಲ್ಲಿ 4 ಬೌಂಡರಿ ಸಹಿತ 33 ರನ್ ಬಾರಿಸಿದರೆ, ಕಗಿಸೋ ರಬಾಡ 15 ರನ್ ಬಾರಿಸಿ ಅಶ್ವಿನ್’ಗೆ 7ನೇ ಬಲಿಯಾದರು.

ಕ್ರಿಕೆಟ್ ಪಂದ್ಯ ನೋಡುವುದನ್ನು ಬಿಟ್ಟಿದ್ಯಾಕೆ ಪ್ರಶ್ನೆಗೆ ಅಶ್ವಿನ್ ಗೂಗ್ಲಿ ಉತ್ತರ!

ಅಶ್ವಿನ್’ಗೆ 7 ವಿಕೆಟ್: ಮೂರನೇ ದಿನದಂತ್ಯಕ್ಕೆ 5 ವಿಕೆಟ್ ಕಬಳಿಸಿ ಮಿಂಚಿದ್ದ ಅಶ್ವಿನ್ ನಾಲ್ಕನೇ ದಿನದಾಟದ ಆರಂಭದಲ್ಲೂ 2 ವಿಕೆಟ್ ಕಬಳಿಸುವ ಮೂಲಕ ತಾನೊಬ್ಬ ಮ್ಯಾಚ್ ವಿನ್ನಿಂಗ್ ಬೌಲರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬೆಂಚ್ ಕಾಯಿಸಿದ್ದ ಅಶ್ವಿನ್, ತವರಿನಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 145 ರನ್ ನೀಡಿ 7 ವಿಕೆಟ್ ಕಬಳಿಸುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ.