Asianet Suvarna News Asianet Suvarna News

'ಫಾದರ್ಸ್ ಡೇಯಂದು ಮಗನೊಂದಿಗೆ ಫೈನಲ್ ಮ್ಯಾಚ್, ತಂದೆ ಯಾವತ್ತಿದ್ದರೂ ತಂದೆಯೇ' ಪಾಕ್'ಗೆ ಟಾಂಗ್ ಕೊಟ್ಟ ವೀರೂ!

ICC ಚಾಂಪಿಯನ್ಸ್ ಟ್ರೋಫಿ 2017ರ ಎರಡನೇ ಸೆಮಿಫೈನಲ್ ಎಜಬಸ್ಟನ್'ನ ಬರ್ಮಿಂಗಮ್'ನಲ್ಲಿ ಭಾರತ ಹಾಗೂ ಬಾಂಗ್ಲಾದ ನಡುವೆ ನಿನ್ನೆ ನಡೆದಿತ್ತು. ಬಾಂಗ್ಲಾ ವಿರುದ್ಧ 9 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿದ ಡಿಫೆಂಡಿಂಗ್ ಚಾಂಪಿಯನ್ಸ್ ಟೀಂ ಇಂಡಿಯಾ, ಫೈನಲ್'ಗೆ ಪ್ರವೇಶಿಸಿ ಮತ್ತೊಂದು ಬಾರಿ ಚಾಂಪಿಯನ್ಸ್ ಆಗುವ ನಿರೀಕ್ಷೆ ಗರಿಗೆದರಿಸಿದೆ. ಇನ್ನು ಮುಂದಿನ ಫೈನಲ್ ಪಂದ್ಯ ಜೂನ್ 18 ರಂದು ಮಧ್ಯಾಹ್ನ 3 ಗಂಟೆಗೆ ಬದ್ಧ ವಿರೋಧಿ ಪಾಕಿಸ್ತಾನದೊಂದಿಗೆ ನಡೆಯಲಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಚರ್ಚೆಗಳ ಸುರಿಮಳೆ ಆರಂಭವಾಗಿದೆ.

india vs pakistan virendra sehwag tweet champions trophy
  • Facebook
  • Twitter
  • Whatsapp

ICC ಚಾಂಪಿಯನ್ಸ್ ಟ್ರೋಫಿ 2017ರ ಎರಡನೇ ಸೆಮಿಫೈನಲ್ ಎಜಬಸ್ಟನ್'ನ ಬರ್ಮಿಂಗಮ್'ನಲ್ಲಿ ಭಾರತ ಹಾಗೂ ಬಾಂಗ್ಲಾದ ನಡುವೆ ನಿನ್ನೆ ನಡೆದಿತ್ತು. ಬಾಂಗ್ಲಾ ವಿರುದ್ಧ 9 ವಿಕೆಟ್'ಗಳ ಭರ್ಜರಿ ಜಯ ಸಾಧಿಸಿದ ಡಿಫೆಂಡಿಂಗ್ ಚಾಂಪಿಯನ್ಸ್ ಟೀಂ ಇಂಡಿಯಾ, ಫೈನಲ್'ಗೆ ಪ್ರವೇಶಿಸಿ ಮತ್ತೊಂದು ಬಾರಿ ಚಾಂಪಿಯನ್ಸ್ ಆಗುವ ನಿರೀಕ್ಷೆ ಗರಿಗೆದರಿಸಿದೆ. ಇನ್ನು ಮುಂದಿನ ಫೈನಲ್ ಪಂದ್ಯ ಜೂನ್ 18 ರಂದು ಮಧ್ಯಾಹ್ನ 3 ಗಂಟೆಗೆ ಬದ್ಧ ವಿರೋಧಿ ಪಾಕಿಸ್ತಾನದೊಂದಿಗೆ ನಡೆಯಲಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಚರ್ಚೆಗಳ ಸುರಿಮಳೆ ಆರಂಭವಾಗಿದೆ.

ಇನ್ನು ಟ್ವಿಟರ್'ನಲ್ಲಿ ಸದಾ ಒಂದಿಲ್ಲೊಂದು ವಿಚಾರವಾಗಿ ಹಾಸ್ಯಾಸ್ಪದ ಟ್ವೀಟ್'ಗಳ ಮೂಲಕ ಪ್ರತಿಯೊಬ್ಬರ ಕಾಲೆಳೆಯುವ ವಿರೇಂದ್ರ ಸೆಹ್ವಾಗ್ ಇದೀಗ ಪಾಕಿಸ್ತಾನಕ್ಕೆ ಟ್ವಿಟರ್'ನಲ್ಲಿ ಟಾಂಗ್ ನೀಡಿದ್ದಾರೆ. 'ಮೊಮ್ಮಗನೇ(ಬಾಂಗ್ಲಾ) ಪ್ರಯತ್ನ ಚೆನ್ನಾಗಿತ್ತು, ತುಂಬಾ ಸೆಣಸಾಡಿ ಸೆಮಿಫೈನಲ್ ತಲುಪಿದ್ದಿರಿ. ಇದು ಮನೆಯೊಳಗಿನ ಮಾತು. ಪಾದರ್ಸ್ ಡೇಯಂದು ಮಗ(ಪಾಕ್)ನೊಂದಿಗೆ ಫೈನಲ್ ಮ್ಯಾಚ್ ಇದೆ. ಈ ಹಾಸ್ಯವನ್ನು ಗಂಭೀರವಾಗಿ ಪರಿಗಣಿಸಬೇಡಿ' ಎಂದು ವೀರೂ ಬರೆದುಕೊಂಡಿದ್ದಾರೆ. ಈ ಮೂಲಕ ಪಾಕ್ ಹಾಗೂ ಬಂಗ್ಲಾ ಎರಡೂ ತಂಡಗಳಿಗೂ ಟಾಂಗ್ ನೀಡಿದ್ದಾರೆ.

ವಿರೇಂದ್ರ ಸೆಹ್ವಾಗ್ ಮಾಡಿರುವ ಈ ಟ್ವೀಟ್'ಗೆ ಹಲವಾರು ಮಂದಿ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದರೆ ಇನ್ನು ಕೆಲವರು ಸೀನಿಯರ್ ಕ್ರಿಕೆಟರ್ ಆಗಿ ಇಂತಹ ಕಮೆಂಟ್ ಮಾಡುವುದು ತಪ್ಪು ಎಂಬ ಸಲಹೆ ನೀಡಿದ್ದಾರೆ.

ಇತ್ತ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡಾ ಟ್ವೀಟ್ ಮಾಡಿದ್ದು, 'ಟೀಂ ಇಂಡಿಯಾ ಉತ್ತಮವಾಗಿ ಆಡಿದೆ. ಈಗ ಕ್ರಿಕೆಟ್'ನ ಬಹುದೊಡ್ಡ ಪಂದ್ಯಕ್ಕಾಗಿ ನಿರೀಕ್ಷೆ ಆರಂಭವಾಗಿದೆ. ಪಾಕಿಸ್ತಾನ ತಂಡ ತನ್ನ ಸಂಯಮ ಕಾಪಾಡಿಕೊಂಡು ಗಮನಕೊಟ್ಟು ಆಡಬೇಕಿದೆ, ಕೇವಲ ಒಂದೇ ಒಂದು ಗೆಲುವು ಬೇಕಿದೆ' ಎಂದಿದ್ದಾರೆ.

Follow Us:
Download App:
  • android
  • ios