ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ ಟೀಂ ಇಂಡಿಯಾಗೆ ದಿಢೀರ್ ಇಂಜುರಿ ಆಘಾತ ಎದುರಾಗಿದೆ. ಇಲ್ಲಿದೆ ಹಾರ್ದಿಕ್ ಪಾಂಡ್ಯ ಇಂಜುರಿ ಅಪ್‌ಡೇಟ್ಸ್
ದುಬೈ(ಸೆ.18): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿರುವ ಟೀಂ ಇಂಡಿಯಾಗೆ ಇಂಜುರಿ ಆಘಾತ ಎದುರಾಗಿದೆ. 18ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 5ನೇ ಎಸೆತದ ಬಳಿಕ ಬೆನ್ನು ನೋವಿನಿಂದ ಕುಸಿದರು.
ತಕ್ಷಣವೇ ಟೀಂ ಇಂಡಿಯಾ ಫಿಸಿಯೋ ಮೈದಾನಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಆದರೆ ತೀವ್ರ ನೋವಿನಿಂದ ಬಳಲುತ್ತಿದ್ದ ಪಾಂಡ್ಯರನ್ನ ಸ್ಟ್ರೆಚರ್ ಮೂಲಕ ಪೆವಿಲಿಯನ್‌ಗೆ ಕರೆದೊಯ್ಯಲಾಯಿತು.
ಪಾಂಡ್ಯ ಇಂಜುರಿ ಕುರಿತು ಬಿಸಿಸಿಐ ಟ್ವೀಟ್ ಮಾಡಿದೆ. ಟೀಂ ಇಂಡಿಯಾದ ವೈದ್ಯಕೀಯ ತಂಡ ಪಾಂಡ್ಯಾಗೆ ಚಿಕಿತ್ಸೆ ನೀಡುತ್ತಿದೆ ಎಂದಿದೆ. ಪಾಂಡ್ಯ ಬದಲಾಗಿ ಕನ್ನಡಿಗ ಮನೀಶ್ ಪಾಂಡೆ ಫೀಲ್ಡಿಂಗ್ ಮಾಡುತ್ತಿದ್ದಾರೆ.
