ದುಬೈ(ಸೆ.19): ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದೆ. ಬೌಲರ್‌ಗಳ ಅಚ್ಚುಕಟ್ಟು ಬೌಲಿಂಗ್ ನಿರ್ವಹಣೆಯಿಂದ ಭಾರತ ಭರ್ಜರಿ ಮೇಲುಗೈ ಸಾಧಿಸಿದೆ. ಇದರ ಜೊತೆಗೆ ಕನ್ನಡಿಗ ಮನೀಶ್ ಪಾಂಡೆ ಹಿಡಿದ ಅದ್ಬುತ ಕ್ಯಾಚ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.

 

 

 ಕೇದಾರ್ ಜಾದವ್ ಬೌಲಿಂಗ್‌ನಲ್ಲಿ ಪಾಕಿಸ್ತಾನ ಸರ್ಫರಾಜ್ ಅಹಮ್ಮದ್ ಸಿಕ್ಸರ್ ಹೊಡೆಯ ಪ್ರಯತ್ನ ಮಾಡಿದರು. ಆದರೆ ಬೌಂಡರಿ ಲೈನ್‌ನಲ್ಲಿದ್ದ ಮನೀಶ್ ಪಾಂಡೆ ಅದ್ಬುತವಾಗಿ ಕ್ಯಾಚ್ ಹಿಡಿಯೋ ಮೂಲಕ ಸರ್ಫರಾಜ್‌ಗೆ ಪೆವಿಲಿಯನ್ ದಾರಿ ತೋರಿಸಿದರು.

ಮನೀಶ್ ಪಾಂಡೆ ಹಿಡಿದು ಸೂಪರ್ ಕ್ಯಾಚ್‌ ಇದೀಗ ವೈರಲ್ ಆಗಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಇಂಜುರಿಯಿಂದ ಫೀಲ್ಡಿಂಗ್ ಅವಕಾಶ ಪಡೆದ ಮನೀಶ್ ಪಾಂಡೆ ಸಿಕ್ಕ ಅದ್ಬುತ ಕ್ಯಾಚ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.