ಭಾರತ-ನ್ಯೂಜಿಲೆಂಡ್​ ಒಂಡೇ ಸಿರೀಸ್​ ಕೆಲ ದಾಖಲೆಗಳಿಗೆ ವೇದಿಕೆಯಾಗಲಿದೆ. ಕ್ಯಾಪ್ಟನ್​ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಆಟಗಾರರು ರೆಕಾರ್ಡ್​ ಮಾಡಲು ತುದಿಗಾಲಲ್ಲೇ ನಿಂತಿದ್ದಾರೆ. ಕೊಹ್ಲಿಯಂತೂ ಫಸ್ಟ್ ಮ್ಯಾಚ್​​ನಲ್ಲೇ ದಾಖಲೆ ಮಾಡಲು ಕಾದು ಕುಳಿತಿದ್ದಾರೆ.

ದೀಪಾವಳಿ ಹಬ್ಬದ ಸಡಗರದಲ್ಲಿರುವ ಭಾರತೀಯರು, ಭಾರತ-ನ್ಯೂಜಿಲೆಂಡ್ ಒಂಡೇ ಸಿರೀಸ್​ಗಾಗಿ ಕಾಯ್ತಿದ್ದಾರೆ. ಅದರಲ್ಲೂ ಸೂಪರ್ ಸಂಡೇ ನಡೆಯುವ ಫಸ್ಟ್​ ವಾರ್​​​​​​​​​​​​​​​​​​​​ಗೆ ಕಾದು ಕುಳಿತಿದ್ದಾರೆ. ಸಂಡೇ ಟೀಂ ಇಂಡಿಯಾ ಗೆದ್ರೆ ಅಳಿದುಳಿದ ಪಟಾಕಿ ಸಿಡಿಸಿ ಸಂಭ್ರಮಿಸಿಬಿಡ್ತಾರೆ. ಕೇವಲ ಗೆಲುವಿಗಾಗಿ ನಮ್ಮವರು ಕಾಯ್ತಿಲ್ಲ. ಕೆಲ ಭಾರತೀಯ ಆಟಗಾರರು ದಾಖಲೆ ಮಾಡುವ ಸನಿಹದಲ್ಲಿದ್ದಾರೆ. ಅವರೇನಾದ್ರೂ ಆ ರೆಕಾರ್ಡ್​ ಮಾಡಿದ್ರೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಸಂಭ್ರಮ ಡಬಲ್ ಆಗಲಿದೆ.

200ನೇ ಪಂದ್ಯದಲ್ಲಿ ದಾಖಲೆ 31ನೇ ಶತಕ ಬಾರಿಸ್ತಾರಾ ಕೊಹ್ಲಿ..?

ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ಅವರು ಒಂಡೇ ಕ್ರಿಕೆಟ್​ನಲ್ಲಿ 30 ಸೆಂಚುರಿಗಳನ್ನ ತಮ್ಮ ಖಾತೆಯಲ್ಲಿಟ್ಟುಕೊಂಡಿದ್ದಾರೆ. ಗರಿಷ್ಠ ಶತಕಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಸಿರೀಸ್​ನಲ್ಲಿ ಇನ್ನೊಂದು ಶತಕ ಸಿಡಿಸಿದ್ರೆ, ಆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದ್ದಾರೆ. ಹೀಗಾಗಿ ಕೊಹ್ಲಿ ಟಾರ್ಗೆಟ್ ಒಂದು ಸೆಂಚುರಿ. ಅಷ್ಟೇ ಅಲ್ಲ, ಆಗ್ಲೇ 199 ಏಕದಿನ ಪಂದ್ಯವಾಡಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧ ಆಡಲು ಕಣಕ್ಕಿಳಿಯುತ್ತಿದಂತೆ 200 ಒಂಡೇ ಮ್ಯಾಚ್ ಆಡಿದ ಸಾಧನೆ ಮಾಡಲಿದ್ದಾರೆ. 200ನೇ ಪಂದ್ಯದಲ್ಲಿ ನೂರು ರನ್ ಹೊಡೆದು ವಿಶ್ವದಾಖಲೆ ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ ಡೆಲ್ಲಿ ಬಾಯ್​.

ಧೋನಿಗೆ 10 ಸಾವಿರ ರನ್​ಗೆ ಬೇಕು 242 ರನ್

ಮಹೇಂದ್ರ ಸಿಂಗ್ ಧೋನಿ ಈಗ ಟೀಂ ಇಂಡಿಯಾ ಪರ ಒಂಡೇ ಕ್ರಿಕೆಟ್​ನಲ್ಲಿ 4ನೇ ಗರಿಷ್ಠ ರನ್ ಸರದಾರ. ಈಗ ನ್ಯೂಜಿಲೆಂಡ್ ಸಿರೀಸ್​​​​​ನಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಲು ಮಹಿ ಕಾದು ಕುಳಿತಿದ್ದಾರೆ. ಧೋನಿ ಇನ್ನು 242 ರನ್​ ಹೊಡೆದ್ರೆ ಏಕದಿನ ಕ್ರಿಕೆಟ್​ನಲ್ಲಿ 10 ಸಹಸ್ರ ರನ್ ಹೊಡೆದ ಸಾಧನೆ ಮಾಡಲಿದ್ದಾರೆ. ಈ ಸಾಧನೆ ಮಾಡಿದ ಭಾರತದ 4ನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರು ಒಂಡೇ ಮ್ಯಾಚ್​​​ಗಳನ್ನಾಡಲಿದೆ. ಈ ಮೂರಲ್ಲೂ ಉತ್ತಮ ಪ್ರದರ್ಶನ ನೀಡಿದ್ರೆ ಮಹಿ, 10 ಸಾವಿರ ರನ್ ಕ್ಲಬ್​ಗೆ ಸೇರಲಿದ್ದಾರೆ. ಅಲ್ಲಿಗೆ ಧೋನಿ ಒಂಡೇ ಕ್ರಿಕೆಟ್ ಜರ್ನಿ ಸಾರ್ಥಕವಾಗಲಿದೆ.

50 ವಿಕೆಟ್ ಸನಿಹದಲ್ಲಿ ಅಕ್ಷರ್​​​-ಬುಮ್ರಾ

ಸ್ಪಿನ್ನರ್ ಅಕ್ಷರ್ ಪಟೇಲ್ ಒಂಡೇ ಕ್ರಿಕೆಟ್​ನಲ್ಲಿ 50 ವಿಕೆಟ್ ಪಡೆಯುವ ಸನಿಹದಲ್ಲಿದ್ದಾರೆ. ಇನ್ನು 6 ವಿಕೆಟ್ ಪಡೆದ್ರೆ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಅಕ್ಷರ್​​​​​​​ ಪಟೇಲ್​​'ರಂತೆ ಒಂಡೇಯಲ್ಲಿ ಜಸ್​'ಪ್ರೀತ್ ಬುಮ್ರಾ, ಇನ್ನು 4 ವಿಕೆಟ್ ಪಡೆದ್ರೆ ಅವರೂ 50 ವಿಕೆಟ್ ಪಡೆದ ಸಾಧನೆ ಮಾಡಲಿದ್ದಾರೆ. ಯಾರ್ಕರ್ ಕಿಂಗ್ ಬುಮ್ರಾನೇ ಟೀಂ ಇಂಡಿಯಾ ಬೌಲಿಂಗ್ ಟ್ರಂಪ್​ಕಾರ್ಡ್​. ಹೀಗಾಗಿ ಬುಮ್ರಾ ಈ ಮೂರು ಮ್ಯಾಚ್​ನಲ್ಲಿ ವಿಕೆಟ್ 50ರ ಸಂಭ್ರಮ ಆಚರಿಸಲಿದ್ದಾರೆ.

3 ಸಾವಿರ ರನ್ ಸನಿಹದಲ್ಲಿ ರಹಾನೆ

ಅಜಿಂಕ್ಯ ರಹಾನೆ ಮಿಡ್ಲ್ ಆರ್ಡರ್​ನಲ್ಲಿ ಆಡುವಾಗ ಅಸ್ಥಿರ ಪ್ರದರ್ಶನ ನೀಡುತ್ತಿದ್ದರು. ಆದ್ರೆ ಓಪನರ್ ಆದ್ಮೇಲೆ ಪ್ರತಿ ಸರಣಿಗೂ ಅವರು ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಈಗ ನ್ಯೂಜಿಲೆಂಡ್ ಸರಣಿಯಲ್ಲಿ ಇನ್ನು 178 ರನ್ ಹೊಡೆದ್ರೆ ಏಕದಿನ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಹೊಡೆದ ಸಾಧನೆ ಮಾಡಲಿದ್ದಾರೆ.

ಧವನ್​'ಗೆ 4 ಸಾವಿರ ರನ್'​ಗೆ ಬೇಕಿದೆ 221 ರನ್

ಗಬ್ಬರ್ ಸಿಂಗ್ ಶಿಖರ್​ ಧವನ್ ಏಕದಿನ ಕ್ರಿಕೆಟ್​ನಲ್ಲಿ 4 ಸಾವಿರ ರನ್ ದಾಖಲಿಸುವ ಸನಿಹದಲ್ಲಿದ್ದಾರೆ. ಇನ್ನು 221 ರನ್ ಹೊಡೆದ್ರೆ 4 ಸಾವಿರ ರನ್ ಸರದಾರರಾಗಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳಿರುವುರದಿಂದ ಶಿಖರ್​, ಇದೇ ಸರಣಿಯಲ್ಲೇ ರನ್​ ಶಿಖರವೇರುವ ಎಲ್ಲ ಸಾಧ್ಯತೆಗಳಿವೆ.

ಈ ಆರು ಆಟಗಾರರು ನ್ಯೂಜಿಲೆಂಡ್ ಸರಣಿಯನ್ನ ಎದುರು ನೋಡ್ತಿದ್ದಾರೆ. ಬೈ ಚಾನ್ಸ್ ಕೆಲ ಆಟಗಾರರಿಗೆ ಕಿವೀಸ್ ಸರಣಿಯಲ್ಲಿ ರೆಕಾರ್ಡ್​ಗಳನ್ನ​ ಮಾಡೋಕೆ ಸಾಧ್ಯವಾಗದೆ ಹೋದ್ರೆ ಮುಂಬರುವ ಶ್ರೀಲಂಕಾ ಸರಣಿಯಲ್ಲಂತೂ ದಾಖಲೆ ಮಾಡೇ ಮಾಡ್ತಾರೆ.