ಕಾನ್ಪುರ(ಸೆ.26): ಐತಿಹಾಸಿಕ 500ನೇ ಟೆಸ್ಟ್​​ ನಲ್ಲಿ ಭಾರತದ ನ್ಯೂಜಿಲೆಂಡ್ ವಿರುದ್ಧ ಗೆಲುವಿನ ಸನಿಹಕ್ಕೆ ಬಂದಿದ್ದು, ಗೆಲುವಿಗೆ ಉಳಿದಿರುವುದು ನಾಲ್ಕೇ ಮೆಟ್ಟಿಲು

ಭಾರತ-ನ್ಯೂಜಿಲೆಂಡ್​​​ ಮೊದಲ ಟೆಸ್ಟ್​​ ಪಂದ್ಯದ ಕೊನೆ ದಿನದಾಟದಲ್ಲಿ ಭಾರತದ ಗೆಲುವಿಗೆ 4 ವಿಕೆಟ್​​ಗಳು ಮಾತ್ರ ಬೇಕಿದೆ. 

5ನೇ ದಿನದಾಟದ ಆರಂಭದಲ್ಲಿ ಭಾರತೀಯ ಸ್ಪಿನ್ನರ್​​ಗಳಿಗೆ ಕಿವೀಸ್​​ ಆಟಗಾರರು ದಿಟ್ಟ ಉತ್ತರ ನೀಡಿದರು. ರೊಂಚಿ ಅರ್ಧಶತಕ ದಾಖಲಿಸುವ ಮೂಲಕ ಗಮನ ಸೆಳೆದು.

ಸ್ಯಾಂಟ್ನರ್​​ ಜೊತೆಗೂಡಿ ಶತಕದ ಜೊತೆಯಾಟಕ್ಕೆ ರವೀಂದ್ರ ಜಡೇಜಾ ಬ್ರೇಕ್​​ ಹಾಕಿದ್ದು, ಇತ್ತೀಚಿನ ವರದಿ ಬಂದಾಗ ಕಿವೀಸ್​​​ 194 ರನ್'ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರೆ, ಭಾರತ ತಂಡ ನಾಲ್ಕು ವಿಕೆಟ್ ಉರುಳಿಸಿ ಗೆಲುವಿನ ನಗೆ ಬೀರುವ ಹುಮ್ಮಸ್ಸಿನಲ್ಲಿದೆ.