ನಾಟಿಂಗ್‌ಹ್ಯಾಮ್(ಆ.20): ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ತೃತೀಯ ದಿನವೂ ಭಾರತ ಬಿಗಿ ಹಿಡಿತ ಸಾಧಿಸಿದೆ. 2 ವಿಕೆಟ್ ನಷ್ಟಕ್ಕೆ 124 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಚೇತೇಶ್ವರ್ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ.

147 ಎಸೆತ ಎದುರಿಸಿದ ಪೂಜಾರ 7  ಬೌಂಡರಿ ಮೂಲಕ ಪೂಜಾರ 50 ರನ್ ಪೂರೈಸಿದರು.  ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. 

ನಾಯಕ ವಿರಾಟ್ ಕೊಹ್ಲಿ ಕೂಡ ಹಾಫ್ ಸೆಂಚುರಿ ಪೂರೈಸಿದ್ದಾರೆ. 82 ಎಸೆತದಲ್ಲಿ ವಿರಾಟ್ ಕೊಹ್ಲಿ 5 ಬೌಂಡರಿ ಮೂಲಕ ಅರ್ಧಶತಕ ಸಿಡಿಸಿದರು.   ಟೀಂ ಇಂಡಿಯಾ ಸದ್ಯ 2 ವಿಕೆಟ್ ನಷ್ಟಕ್ಕೆ 185 ರನ್ ಪೂರೈಸಿದೆ. ಈ ಮೂಲಕ 353 ರನ್ ಮುನ್ನಡೆ ಪಡೆದುಕೊಂಡಿದೆ.