ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬದಲಾವಣೆ ಮಾಡುತ್ತಾ? ಚೇತೇಶ್ವರ್ ಪೂಜಾರಗೆ ಅವಕಾಶ ನೀಡ್ತಾರ? ಇಬ್ಬರು ಸ್ಪಿನ್ನರ್‌ಗಳು ಕಣಕ್ಕಿಳೀತಾರ? ಈ ಎಲ್ಲಾ ಪ್ರಶ್ನೆಗಳಿಗೆ ಸ್ವತಃ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.

ಲಾರ್ಡ್ಸ್(ಆ.08): ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯ ಟೀಂ ಇಂಡಿಯಾ ಪಾಲಿಗೆ ಮಹತ್ವದ್ದಾಗಿದೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆರಂಭಿಕ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ, ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ.

2ನೇ ಪಂದ್ಯ ಗೆದ್ದು ಸರಣಿ ಸಮಭಲ ಮಾಡಲು ವಿರಾಟ್ ಕೊಹ್ಲಿ ಸೈನ್ಯ ಸಜ್ಜಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಕುರಿತು ಅಪಸ್ವರಗಳು ಎದ್ದಿತ್ತು. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಚೇತೇಶ್ವರ್ ಪೂಜಾರ ಕಣಕ್ಕಿಳಿಸಬೇಕಿತ್ತು ಅನ್ನೋ ಮಾತು ಕೇಳಿಬಂದಿತ್ತು.

ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿನ ಬದಲಾವಣೆ ಕುರಿತು ಸೂಚನೆ ನೀಡಿದ್ದಾರೆ. ಆದರೆ ಈ ಬಾರಿ ಇಬ್ಬರು ಸ್ಪಿನ್ನರ್ ಕಣಕ್ಕಿಳಿಸೋ ಸಾಧ್ಯತೆ ಕುರಿತು ಕೊಹ್ಲಿ ಹೇಳಿದ್ದಾರೆ.

Scroll to load tweet…

ಮೊದಲ ಪಂದ್ಯದಲ್ಲಿ ಆರ್ ಅಶ್ವಿನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಹೀಗಾಗಿ ಅಶ್ವಿನ್ ಜೊತೆಗೆ ಕುಲದೀಪ್ ಯಾದವ್ ಅಥವಾ ರವೀಂದ್ರ ಜಡೇಜಾಗೆ ಅವಕಾಶ ನೀಡೋ ಸಾಧ್ಯತೆ ಇದೆ. ಹೀಗಾದಲ್ಲಿ ಒರ್ವ ವೇಗಿ ಸ್ಥಾನ ಕಳೆದುಕೊಳ್ಳಲಿದ್ದಾರೆ.

ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸಲಿರುವು ಟೀಂ ಇಂಡಿಯಾ ತಂಡದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ಹೀಗಾಗಿ ಯಾರು ಸ್ಥಾನ ಪಡೆಯಲಿದ್ದಾರೆ. ಯಾರು ತಂಡದಿಂದ ಹೊರಬೀಳಲಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

Scroll to load tweet…