ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಶಾಕ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 6:58 PM IST
India vs england test Joe root injury big blow for host
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿನ ಆಟಗಾರರ ಇಂಜುರಿ ಲಿಸ್ಟ್ ಬೆಳೆಯುತ್ತಿದೆ. ಇದೀಗ ಇಂಗ್ಲೆಂಡ್ ತಂಡದ ಅಭ್ಯಾಸದ ವೇಳೆ ಪ್ರಮುಖ ಆಟಗಾರ ಗಾಯಕ್ಕೆ ತುತ್ತಾಗಿರೋದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಲಾರ್ಡ್ಸ್(ಆ.08): ಮೊದಲ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಇದೀಗ 2ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿರುವ ಇಂಗ್ಲೆಂಡ್ ತಂಡಕ್ಕೆ ಅಭ್ಯಾಸದ ವೇಳೆ ಆಘಾತ ಎದುರಾಗಿದೆ. ನೆಟ್ ಪ್ರಾಕ್ಟೀಸ್ ವೇಳೆ ಇಂಗ್ಲೆಂಡ್ ನಾಯಕ ಜೋ ರೂಟ್ ಗಾಯಗೊಂಡು, ಅಭ್ಯಾಸ ಮೊಟಕುಗೊಳಿಸಿದ್ದಾರೆ.

ಕ್ರಿಸ್ ವೋಕ್ಸ್ ಎಸೆತದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ಜೋ ರೂಟ್, ಬಲಗೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ತಕ್ಷಣವೇ ರೂಟ್ ಅಭ್ಯಾಸ ಮೊಟಕುಗೊಳಿಸಿದ್ದಾರೆ. ರೂಟ್ ಇಂಜುರಿ ತಂಡದ ಆತಂಕವನ್ನ ಹೆಚ್ಚಿಸಿತ್ತು. ತಂಡದ ಫಿಸಿಯೋ ಹಾಗೂ ವೈದ್ಯರು ಜೋ ರೂಟ್ ಇಂಜುರಿ ಪರೀಕ್ಷಿಸಿದ್ದಾರೆ.  ಗಂಭೀರ ಗಾಯವಾಗಿಲ್ಲ. ಹೀಗಾಗಿ ಜೋ ರೂಟ್ ನಾಳಿನ(ಆ.09) ಲಾರ್ಡ್ಸ್ ಟೆಸ್ಟ್ ಪಂದ್ಯ ಆಡಲಿದ್ದಾರೆ ಎಂದಿದ್ದಾರೆ.

ರೂಟ್ ಲಭ್ಯತೆ ಕುರಿತು ಫಿಸಿಯೋ ಸ್ಪಷ್ಟಪಡಿಸಿದ್ದರೂ,  ಇಂಜುರಿ  ಬಳಿಕ ಜೋ ರೂಟ್ ಅಭ್ಯಾಸಕ್ಕೆ ಇಳಿದಿಲ್ಲ. ಇದು ಇಂಗ್ಲೆಂಡ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ಜೋ ರೂಟ್ ಮೊದಲ ಪಂದ್ಯದಲ್ಲಿ 80 ರನ್ ಸಿಡಿಸಿದ್ದರು. 

loader