ಒಲ್ಡ್ ಟ್ರಾಫೋರ್ಡ್(ಜು.03): ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 6ನೇ ಕಬಳಿಸುವಲ್ಲಿ ಯಶಸ್ವಿಯಾಗಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ಆರಂಭದಲ್ಲೇ ಅಬ್ಬರಿಸಿತು. ಆದರೆ ಜೇಸನ್ ರಾಯ್ 30 ರನ್ ಸಿಡಿಸಿ, ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.

ಮೊದಲ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ಚೇತರಿಸಿಕೊಂಡಿತು. ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ 45 ರನ್‌ಗಳ ಜೊತೆಯಾಟ ನೀಡಿದರು. ಆದರೆ ಅಲೆಕ್ಸ್ ಹೇಲ್ಸ್ ಕೇವಲ 8 ರನ್ ಸಿಡಿಸಿ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಇಯಾನ್ ಮಾರ್ಗನ್ 7 ರನ್ ಸಿಡಿಸಿ ಕುಲದೀಪ್ ಸ್ಪಿನ್ ಮೋಡಿಗೆ ಬಲಿಯಾದರು. ಜಾನಿ ಬೈರಿಸ್ಟೋ ಬಂದ ಹಾಗೆ ಸ್ಟಂಪ್ ಔಟ್ ಆದರು. ಇನ್ನು ಜೋ ರೂಟ್ ಬಂದ ಹಾಗೇ ಪೆವಿಲಿಯನ್ ಸೇರಿದರು.  ಈ ಮೂಲಕ ಇಂಗ್ಲೆಂಡ್ 6ನೇ ವಿಕೆಟ್ ಕಳೆದುಕೊಂಡಿದೆ. 

ಕುಲದೀಪ್ ಯಾದವ್ ಪ್ರಮುಖ 4 ವಿಕೆಟ್ ಕಬಳಿಸೋ ಮೂಲಕ ಭಾರತಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟಿದ್ದಾರೆ. 107 ರನ್‌ಗಳಿಗೆ(13.3 ಓವರ್) 3 ವಿಕೆಟ್ ಕಳೆದುಕೊಂಡಿದೆ. ಆದರೆ  ಅರ್ಧಶತಕ ಸಿಡಿಸಿ ಅಬ್ಬರಿಸುತ್ತಿರುವ ಜೋಸ್ ಬಟ್ಲರ್ ಭಾರತದ ಬೌಲರ್‌ಗಳನ್ನ ಕಾಡುತ್ತಿದ್ದಾರೆ.