ಬೆಂಗಳೂರು[ಜು.06]: ಇಂದು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೋಫಿಯಾ ಗಾರ್ಡನ್ ಮೈದಾನದಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಕಾದಾಡಲಿದ್ದು, ಭಾರತ ಇಂದಿನ ಪಂದ್ಯವನ್ನು ಗೆದ್ದು ಸರಣಿ ಕೖವಶ ಮಾಡಿಕೊಳ್ಳುವ ಇರಾದೆಯಲ್ಲಿದ್ದರೆ, ತವರಿನಲ್ಲಿ ಕಮ್’ಬ್ಯಾಕ್ ಮಾಡುವ ಒತ್ತಡದಲ್ಲಿದೆ ಇಯಾನ್ ಮಾರ್ಗನ್ ನೇತೃತ್ವದ ಆಂಗ್ಲರ ತಂಡ...

ಇದೆಲ್ಲವುದರ ನಡುವೆ ಇಂದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಗಳಿದ್ದು, ಧೋನಿ, ಸುರೇಶ್ ರೈನಾ, ರೋಹಿತ್ ಶರ್ಮಾ ಪಾಲಿಗೆ ಸ್ಮರಣೀಯವಾಗುವ ಸಾಧ್ಯತೆಯಿದೆ. ಇಂದಿನ ಪಂದ್ಯದ ವಿಶ್ಲೇಷಣೆ ನಿಮ್ಮ ಮುಂದೆ...