ಭಾರತ-ಇಂಗ್ಲೆಂಡ್ ಟೆಸ್ಟ್: 287 ರನ್‌ಗೆ ಇಂಗ್ಲೆಂಡ್ ಆಲೌಟ್

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 2, Aug 2018, 4:38 PM IST
India vs england India openers start cautiously
Highlights

ಇಂಗ್ಲೆಂಡ್ ತಂಡವನ್ನ 287 ರನ್‌ಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ದ್ವಿತೀಯ ದಿನದ ಪ್ರದರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್

ಎಡ್ಜ್‌ಬಾಸ್ಟನ್(ಆ.02): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ಆರಂಭದಲ್ಲೇ  ಕುತೂಹಲ ಮೂಡಿಸಿದೆ. 9 ವಿಕೆಟ್ ನಷ್ಟಕ್ಕೆ 285 ರನ್‌ಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ 2 ರನ್ ಪೇರಿಸಿ 287 ರನ್‌ಗೆ ಆಲೌಟ್ ಆಯಿತು.

 

 

ಕೇವಲ 10 ಎಸೆತ ಎದುರಿಸಿದ ಇಂಗ್ಲೆಂಡ್ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆರ್ ಅಶ್ವಿನ್ 4 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ 3 ವಿಕೆಟ್ ಉರುಳಿಸಿದರು. ಇನ್ನು ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ತಲಾ 1 ವಿಕೆಟ್ ಪಡೆದರು.

ಇಂಗ್ಲೆಂಡ್ ತಂಡವನ್ನ ಆಲೌಟ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ಆರಂಭಿಸಿದೆ. ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಡೀಸೆಂಟ್ ಒಪನಿಂಗ್ ನೀಡಿದ್ದಾರೆ. ಈ ಮೂಲಕ ಭಾರತ ದಿಟ್ಟ ಹೋರಾಟ ನೀಡುತ್ತಿದೆ.

 

 

loader