ಭಾರತ-ಇಂಗ್ಲೆಂಡ್ ಟಿ20: ಒಲ್ಡ್ ಟ್ರಾಫೋರ್ಡ್ ಹೋರಾಟಕ್ಕೆ ಕೊಹ್ಲಿ ಬಾಯ್ಸ್ ರೆಡಿ

India vs England: India All Set For Limited-Overs Series Challenge vs England
Highlights

ಒಲ್ಡ್ ಟ್ರಾಫೋರ್ಡ್‌ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದ ಮೂಲಕ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ. ಯಾರಿಗಿದೆ ಗೆಲುವಿನ ಅವಕಾಶ? ಇಲ್ಲಿದೆ.

ಒಲ್ಡ್ ಟ್ರಾಫೋರ್ಡ್(ಜು.02): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ವೇದಿಕೆ ಸಜ್ಜಾಗಿದೆ. ಐರ್ಲೆಂಡ್ ವಿರುದ್ಧದ 2 ಟಿ20 ಪಂದ್ಯ ಗೆದ್ದು ಇಂಗ್ಲೆಂಡ್ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ ಶುಭಾರಂಭದ ವಿಶ್ವಾಸದಲ್ಲಿದೆ. 

ಒಲ್ಡ್ ಟ್ರಾಫೋರ್ಡ್‌ನಲ್ಲಿ ನಾಳೆ(ಜು.03) ನಡೆಯಲಿರುವ ಮೊದಲ ಟಿ20 ಪಂದ್ಯದೊಂದಿದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಮೇಲ್ನೋಟಕ್ಕೆ ಉಭಯ ತಂಡಗಳು ಸಮಭಲದಿಂದ ಕೂಡಿದೆ. ಆದರೆ ಭಾರತದ ಇಂಜುರಿ ಸಮಸ್ಯೆ ತೊಡಕಾಗಲಿದೆ.

ವೇಗಿ ಜಸ್‌ಪ್ರೀತ್ ಬುಮ್ರಾ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಭಾರತ ಡೆತ್ ಓವರ್ ಸ್ಪೆಷಲಿಸ್ಟ್ ಸೇವೆ ಕಳೆದುಕೊಂಡಿದೆ. ಆದರೆ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ವಿರಾಟ್ ಕೊಹ್ಲಿ ಸೈನ್ಯ, ಆತಿಥೇಯರಿಗೆ ಕಠಿಣ ಸವಾಲು ನೀಡೋದರಲ್ಲಿ ಅನುಮಾನವಿಲ್ಲ.

ಶಿಖರ್ ಧವನ್,ರೋಹಿತ್ ಶರ್ಮಾ, ನಾಯಕ ವಿರಾಟ್, ಕೆಎಲ್ ರಾಹುಲ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ ಯಾವುದೇ ಎದುರಾಳಿಗೆ ನಡುಕ ಹುಟ್ಟಿಸಬಲ್ಲದು. ಆದರೆ ಬೌನ್ಸಿ ಪಿಚ್‌ ಹಾಗೂ ಇಂಗ್ಲೆಂಡ್ ಕಂಡೀಷನ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ತಂಡದ ಮೇಲಿದೆ.

ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಬದಲು, ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ತಂಡ ಸೇರಿಕೊಂಡಿದ್ದಾರೆ. ಇನ್ನು ಉಮೇಶ್ ಯಾದವ್ ಹಾಗು ಭುವನೇಶ್ವರ್ ಕುಮಾರ್ ವೇಗದ ಸಾರಥ್ಯವಹಿಸಲಿದ್ದಾರೆ. ಐರ್ಲೆಂಡ್‌ನಲ್ಲಿ ಮೋಡಿ ಮಾಡಿದ ಕುಲದೀಪ್ ಹಾಗೂ ಯಜುವೇಂದ್ರೆ ಚೆಹಾಲ್ ಸ್ಪಿನ್ ಜವಾಬ್ದಾರಿ ನಿರ್ವಹಸಲಿದ್ದಾರೆ.

ಭಾರತ ಐರ್ಲೆಂಡ್ ತಂಡವನ್ನ ಮಣಿಸಿ ಇಂಗ್ಲೆಂಡ್ ನಾಡಿಗೆ ಕಾಲಿಟ್ಟರೆ, ಅತ್ತ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಜೊತೆಗೆ ತವರಿ ಕಂಡೀಷನ್ ಹಾಗೂ ಪಿಚ್ ಆತಿಥೇಯರಿಗೆ ಅನೂಕಲವಾಗಲಿದೆ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

ಪಂದ್ಯದ ದಿನಾಂಕ: ಜುಲೈ 03, 2018

ಪಂದ್ಯದ ಸಮಯ: ರಾತ್ರಿ 10 ಗಂಟೆ(ಭಾರತೀಯ ಸಮಯ)

ಸ್ಥಳ: ಒಲ್ಡ್ ಟ್ರಾಫೋರ್ಡ್, ಇಂಗ್ಲೆಂಡ್

loader